ಹರಿಗೆಯಲ್ಲಿ ಸ್ಮಶಾನ ನಿರ್ಮಾಣಕ್ಕೆ ನಾಲ್ಕು ಮುಕ್ಕಾಲು ಎಕರೆ ಭೂಮಿ ಮಂಜೂರು 

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 7, 2025

ಶಿವಮೊಗ್ಗ | ಯವದ್ವನಿ ಸಾಮಾಜಿಕ ಸೇವಾ ಸಂಸ್ಥೆಯ ಸದಸ್ಯರ  2 ವರ್ಷಗಳ ಸತತ ಹೋರಾಟದ ಫಲದಿಂದ ಹರಿಗೆ ಗ್ರಾಮದಲ್ಲಿ ಸ್ಮಶಾನ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು ನಾಲ್ಕು ಮುಕ್ಕಾಲು ಎಕರೆ ಭೂಮಿಯನ್ನು ನೀಡಿದ್ದಾರೆ ಎಂದು ಯವಧ್ವನಿ ಸದಸ್ಯರಾದ ನಾಗರಾಜ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಊರಿಗೆ ಇದುವರೆಗೂ ಸುಮಾರು 65 ವರ್ಷಗಳಿಂದ ನಮ್ಮಲ್ಲಿ ಸ್ಮಶಾನಕ್ಕೆ ನಮ್ಮದೇ ಆದ ಜಾಗ ಇರಲ್ಲಿಲ್ಲ ಮಾನವೀಯತೆ ದೃಷ್ಟಿಯಿಂದ ಕೆ.ಇ.ಬಿ. ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಇದನ್ನು ತುಂಬಾ ಮನಸ್ಸಿಗೆ ತೆಗೆದುಕೊಂಡ ಯುವಧ್ವನಿ ಸಂಸ್ಥೆಯ ಯುವಕರು ಸತತ ಹೋರಾಟದ ಮೂಲಕ ಮಾಡಿದ್ದಾರೆ ಎಂದರು. 

ಯುವಧ್ವನಿ ಸಾಮಾಜಿಕ ಸೇವಾ ಸಂಸ್ಥೆಯು ಹರಿಗೆ ಬಡಾವಣೆಯಲ್ಲಿ ಯುವಕರ ಸಂಘವು ಸುಮಾರು 10 ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಕ್ರಮಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ, ಉಚಿತ ಸ್ಪೋಕನ್ ಇಂಗ್ಲೀಷ್ ತರಬೇತಿ ಶಿಬಿರ, ವನಮಹೋತ್ಸವ, ಶಾಲಾ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ತರಬೇತಿ. ಪ್ರತಿಭಾ ಪುರಸ್ಕಾರ, ಊರಿನ ಮಕ್ಕಳಿನ ಮೇಲೆ ಉತ್ತಮವಾದ ಪರಿಣಾಮ ಬೀರಲು ನಮ್ಮ ಬಡಾವಣೆಗೆ ರಾಷ್ಟ್ರಪ್ರಶಸ್ತಿ ವಿಜೇತೆ ಸಾಲುಮರದ ತಿಮ್ಮಕ್ಕ ಹಾಗೂ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರಾದ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ರವರಂತಹ ಮಹಾನ್ ಗಣ್ಯರನ್ನು ಕರೆಯಿಸಿ ಸನ್ಮಾನಿಸಿದ ಕೀರ್ತಿ ಯುವಧ್ವನಿ ಸಾಮಾಜಿಕ ಸೇವಾ ಸಂಸ್ಥೆಗೆ ಸಲ್ಲುತ್ತದೆ ಎಂದರು.

SUMMARY  | As a result of 2 years of continuous struggle of the members of Yavadvani Social Service Society, the Deputy Commissioner has decided to construct a cemetery in Harige village 4. 3/4 acre of land has been given

KEYWORDS | Yavadvani,  cemetery,  Harige village, 

 

Share This Article