SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024
ಶಿವಮೊಗ್ಗ | ನಿನ್ನೆ ದಿನದ ಶಿವಮೊಗ್ಗ ನಗರದ ಡಿ.ಎ.ಆರ್. ಆವರಣದಲ್ಲಿ ನಿರ್ಮಿಸಿರುವ ಪೊಲೀಸ್ ಸಮುದಾಯ ಭವನವನ್ನ ಉದ್ಘಾಟಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್, ಆ ಬಳಿಕ ಜಿಲ್ಲಾ ಪೊಲೀಸ್ ಪ್ರಗತಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ವಿವಾದಾತ್ಮಕ ಫ್ಲೆಕ್ಸ್, ಬ್ಯಾನರ್ ಬಗ್ಗೆ ಎಚ್ಚರವಹಿಸಿ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ಸೂಚನೆ ನೀಡಿದೆ. ವಿವಿಧ ಆಚರಣೆಯ ವೇಳೆ ವಿವಾದಾತ್ಮಕ ಪ್ಲೆಕ್ಸ್‌ಗಳನ್ನ ಹಾಕುತ್ತಿದ್ದಾರೆ. ಅಂತಹ ಪ್ಲೆಕ್ಸ್‌ಗಳ ಬಗ್ಗೆ ನಿಗಾವಹಿಸಿ, ಸಂಬಂಧಪಟ್ಟವರಿಗೆ ಎಚ್ಚರಿಸಿ ಕ್ರಮ ತೆಗೆದುಕೊಂಡ್ರೇ, ವಿವಾದಗಳು ಸೃಷ್ಟಿಯಾಗಲ್ಲ ಎಂದಿದ್ದಾರೆ.
ಕಾನೂನು ಸುವ್ಯವಸ್ಥೆಯ ಪರಿಶೀಲನೆ ನಡೆಸಿದ ಗೃಹಸಚಿವರು, ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚೋದನಕಾರಿ ಪೋಸ್ಟ್‌ಗಳು ಹರಿದಾಡುವ ಬಗ್ಗೆ ಪೊಲೀಸ್ ಅಧಿಕಾರಿಗಳು ನಿಗಾಹವಿಸಬೇಕು, ಅಂತಹ ಪೋಸ್ಟ್‌ಗಳನ್ನ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು
SUMMARY | Home Minister G Parameshwara inaugurated the police community hall and later reviewed the progress of the district police.
KEYWORDS | Shimoga, DAR in Shivamogga city, Home Minister G Parameshwaŗa police community hall