SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 16, 2024 sagara news
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಎಡೆಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ನಿನ್ನೆ ನಡೆದಿದೆ.
ಘಟನೆಯಲ್ಲಿ ವೇಗವಾಗಿ ಆನಂದಪುರದಿಂದ ಎಡೆಹಳ್ಳಿ ಕಡೆಗೆ ಬರುತ್ತಿದ್ದ ಕಾರು ಎಡೆಹಳ್ಳಿ ಸರ್ಕಲ್ ನಲ್ಲಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಆ ಬಳಿಕ ಲೈಟ್ ಕಂಬದ ಪಕ್ಕದ ಕಟ್ಟೆಗೆ ಹೊಡೆದಿದೆ , ಬಳಿಕ ಪಲ್ಟಿಯಾಗಿದೆ. ಇನ್ನೂ ಈ ಅಪಘಾತದಲ್ಲಿ ವಾಹನದಲ್ಲಿದ್ದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ
ಆನಂದಪುರ ಪೊಲೀಸ್ ಠಾಣೆ-Anandpur Police Station
ವಿಷಯ ತಿಳಿಯುತ್ತಲೇ ಸ್ಥಳದಲ್ಲಿ ಜನರು ಜಮಾಯಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ ತಕ್ಷಣಕ್ಕೆ ಆಂಬುಲೆನ್ಸ್ ಬರಲಿಲ್ಲ. ಈ ನಡುವೆ ಸ್ಥಳಕ್ಕೆ ಬಂಧದ ಆನಂದಪುರ ಪೊಲೀಸರು ತಮ್ಮ ಪೊಲೀಸ್ ವ್ಯಾನ್‌ನಲ್ಲಿಯೇ ಗಾಯಾಳುವನ್ನ ಆಸ್ಪತ್ರೆಗೆ ಸಾಗಿಸಿ, ಆತನ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ