ಸಿರಿವಂತೆ ಲೇಡಿ ಮರ್ಡರ್‌ ಕೇಸ್‌, ಸೆಷನ್‌ ಕೋರ್ಟ್‌ನಲ್ಲಿ ಆರೋಪ ಸಾಬೀತು | ಮೂವರಿಗೆ ಜೀವಾವಧಿ ಶಿಕ್ಷೆ

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 25, 2025 ‌‌  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಿರಿವಂತೆಯಲ್ಲಿ  2020 ರಲ್ಲಿ ನಡೆದಿದ್ದ ಗೃಹಿಣಿಯ ಕೊಲೆ ಪ್ರಕರಣದಲ್ಲಿ  5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 

ಏನಿದು ಕೇಸ್‌, 

ದಿನಾಂಕಃ 12-08-2020 ರಂದು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರವಂತೆ ಗ್ರಾಮದಲ್ಲಿ , 44 ವರ್ಷದ ಮಹಿಳೆಯೊಬ್ಬಳನ್ನು ಆಕೆಯ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿತ್ತು. ಅಲ್ಲದೆ ಅವರ ಮೈಮೇಲಿದ್ದ ಬಂಗಾರವನ್ನು ದೋಚಿದ್ದರು. ಈ ಸಂಬಂಧ  302  ಐಪಿಸಿ ಅಡಿ ಕೇಸ್‌ ಆಗಿತ್ತು. ಸಾಗರ ಗ್ರಾಮಾಂತರ ಪಿಐ ಸುನಿಲ್‌ ಈ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರು. 

 

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಣ್ಣಪ್ಪ ನಾಯಕ್ ಜಿ ವಾದ ಮಂಡಿಸಿದ್ದರು. ಇದೀಗ ಪ್ರಕರಣದ ವಿಚಾರಣೆ ಮುಗಿದಿದ್ದು, 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದ, ನ್ಯಾಯಾಧಿಶರಾದ ಪ್ರಭಾವತಿ ತೀರ್ಪು ನೀಡಿದ್ದಾರೆ. 

ಕೋರ್ಟ್‌ ತೀರ್ಪು

ಆರೋಪಿತರಾ 1) ಅರುಣ @ ಗೆಂಡೆ ಅರುಣ, 27  ವರ್ಷ, ಸಾಗರ ಟೌನ್,  2) ಅಭಿಜಿತ್, 28 ವರ್ಷ, ಸಾಗರ ಟೌನ್‌ ಮತ್ತು 3) ಇರ್ಫಾನ್‌, 20 ವರ್ಷ, ಸಾಗರ ಟೌನ್ ಇವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ರೂ 10,000/- ದಂಡ ವಿಧಿಸಿ ಆದೇಶಿಸಿದ್ದಾರೆ. 

 

SUMMARY | 5th Additional District and Sessions Court, Shimoga verdict, Sagar, Sirivante, life sentence for three

KEY WORDS |‌  5th Additional District and Sessions Court, Shimoga, verdict, Sagar, Sirivante, life sentence for three

Share This Article