ಸಿಎನ್​ಜಿ ಗ್ಯಾಸ್​ ಸ್ಫೋಟ | ಭದ್ರಾವತಿಯ ಯುವಕ ಸಾವು

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 10, 2025

ಲಾರಿಗೆ ಸಿಎನ್‌ಜಿ ಗ್ಯಾಸ್ ಅನ್ನು ತುಂಬಿಸುವ ವೇಳೆ ಅದು ಸ್ಪೋಟಗೊಂಡ ಪರಿಣಾಮ ಭದ್ರಾವತಿ ಮೂಲದ ಯುವಕನೊಬ್ಬ ಸಾವನಪ್ಪಿದ್ದಾನೆ.

ಭದ್ರಾವತಿ ತಾಲೂಕಿನ ಗೋಣಿಬೀಡಿನ ಕಂಬದಾಳು ಹೊಸೂರಿನ ಯುವಕ ಲಕ್ಷ್ಮಣ (27) ಸಾವನ್ನಪ್ಪಿದ ದುರ್ದೈವಿ.

ಚಿತ್ರದುರ್ಗದಲ್ಲಿ ಸಿಎನ್​ ಜಿ ಗ್ಯಾಸನ್ನು  ಲಾರಿಗೆ ಡಂಪ್ ಮಾಡಿ ಶಿವಮೊಗ್ಗದ ಕಡೆ ಹೊರಡುವಾಗ ಈ ಅವಘಡ ಸಂಭವಿಸಿದೆ. ಮೃತ ಯುವಕ ಲಕ್ಷ್ಮಣ್ ಈ ಹಿಂದೆ ಶಿವಮೊಗ್ಗದ ಏರ್ ಪೋರ್ಟ್ ನಲ್ಲಿ ಟ್ಯಾಕ್ಸಿ ಚಲಾಯಿಸಿಕೊಂಡಿದ್ದು, ಇತ್ತೀಚೆಗೆ ಲಾರಿಗಳಿಗೆ ಸಿಎನ್ ಜಿ ಗ್ಯಾಸ್ ತುಂಬಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.ಇವರ ಸಾವಿಗೆ ಏರ್ ಪೋರ್ಟ್ ನ ಟ್ಯಾಕ್ಸಿ  ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಶಿವಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ.

SUMMARY | A youth from Bhadravathi died after a lorry exploded while loading CNG gas into it.

KEYWORDS | Bhadravathi,  died,  exploded, CNG gas,

Share This Article