SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 24, 2024 siddaramaiah news
ರಾಜ್ಯಪಾಲರು ನೀಡಿದ್ದ ಅಭಿಯೋಜನಾ (ಪ್ರಾಸಿಕ್ಯೂಷನ್) ಮಂಜೂರಾತಿಯನ್ನು ಪ್ರಶ್ನಿಸಿದ್ದ ರಾಜ್ಯ ಸರ್ಕಾರದ ಸಿಎಂ ಸಿದ್ದರಾಮಯ್ಯರವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಸಂಬಂಧ ಕೆಳದ ಸೆಪ್ಟೆಂಬರ್ 12 ರಂದು ಹೈಕೋರ್ಟ್ ತನ್ನ ತೀರ್ಪನ್ನ ಕಾಯ್ದಿದಿರಿಸಿತ್ತು.
ಏನಿದು ಪ್ರಕರಣ?
ಮುಡಾ ನಿವೇಶನದಲ್ಲಿ ಕೊಟ್ಟ ಜಾಗಕ್ಕೆ ಬದಲಾಗಿ ನಿವೇಶಗಳನ್ನ ಹಂಚಿಕೆ ಮಾಡಿಕೊಂಡಿದ್ದರ ಬಗೆಗಿನ ಪ್ರಕರಣ ಇದಾಗಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯರವರ ವಿರುದ್ಧವಾಗಿ ತನಿಖೆಗೆ ಕೋರಿ ದಾಖಲಾದ ದೂರಿನನ್ವಯ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಹೀಗೆ ಅನುಮತಿ ನೀಡುವಾಗ ಸೆಕ್ಷನ್ 17ಎ ಅಡಿಯಲ್ಲಿ ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಿತ್ತು ಎಂಬುದು ಸಿದ್ದರಾಮಯ್ಯರ ಪರವಾದ ವಾದವಾಗಿತ್ತು. ಇದೀಗ ಹೈಕೋರ್ಟ್ ಅದರ ಅಗತ್ಯವಿಲ್ಲ ಎಂದಿದೆ. ಅಲ್ಲದೆ ಈ ಸಂಬಂಧ ನೀಡಲಾಗಿದ್ದ ಮಧ್ಯಂತರ ಆದೇಶ ಮುಂದುವರಿಯಲ್ಲ ಎಂದಿದೆ