SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024
ಶಿವಮೊಗ್ಗ | ಸಾಗರ ನಗರಸಭೆಯಲ್ಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸದಸ್ಯೆ ಕೋರ್ಟ್‌ನಿಂದ ತಡೆಯಾಜ್ಞೆ ತಂದಿರುವ ವಿಷಯ ಇದೀಗ ಬೇರೆಯದ್ದೆ ಆಯಾಮಗಳಲ್ಲಿ ಚರ್ಚೆಯಾಗುತ್ತಿದೆ. ಈ ಸಂಬಂಧ ನಿನ್ನೆಯಷ್ಟೆ ಸದಸ್ಯೆ ಟಿಡಿ ಮೇಘರಾಜ್ ತಮ್ಮನ್ನ ನಿಂಧಿಸಿದ್ದರು ಎಂದು ದೂರಿದ್ದರು. ಈ ಸಂಬಂಧ ಕಾಂಗ್ರೆಸ್ ಪಕ್ಷ ಪ್ರತಿಭಟನೆಯ ಎಚ್ಚರಿಕೆಯನ್ನ ನೀಡಿತ್ತು.
ಇದರ ಬೆನ್ನಲ್ಲೆ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್ ನನ್ನ ಮಾತನಿಂದ ಲಲಿತಮ್ಮರ ಮನಸ್ಸಿಗೆ ನೋವಾಗಿದ್ದರೆ ನಾನು, ಗಣೇಶ್ ಪ್ರಸಾದ್, ಮಧುರಾ ಶಿವಾನಂದ್ ಮತ್ತು ಮಹೇಶ್ ಕ್ಷಮೆಯಾಚಿಸುವುದಾಗಿ ಹೇಳಿದ್ದಾರೆ.
ಮುಂದುವರಿದು ತಮ್ಮ ಉದ್ದೇಶ ಅವರನ್ನ ನಿಂದಿಸುವುದಾಗಿರಲಿಲ್ಲ ಎಂದ ಅವರು, ನಗರಸಭೆ ಕಾಯ್ದೆಯ ಪ್ರಕಾರ, ತಡೆಯಾಜ್ಞೆ ತಂದವರು ಕಲಾಪದಲ್ಲಿ ಪಾಲ್ಗೊಳ್ಳುವಂತಿಲ್ಲ. ಅವರು ಪಾಲ್ಗೊಂಡಿದ್ದರು. ಈ ವೇಳೆ ತಡೆಯಾಜ್ಞೆ ತಂದು ಅಪರಾಧಿಯಾಗಿದ್ದೀರಿ ಎಂದಿದ್ದೆ. ಈ ಬಗ್ಗೆ ಅವರಿಗೆ ನೋವಾಗಿದ್ದರೇ ಕ್ಷಮೆ ಕೇಳುವಾಗಿ ತಿಳಿಸಿದ್ದಾರೆ.
SUMMARY | BJP district president TD Meghraj said he would apologise to Lalithamma if she was hurt by the incident


KEYWORDS | BJP district president TD Meghraj, apologise ,Lalithamma ,Sagar Municipal Corporation