SHIVAMOGGA | MALENADUTODAY NEWS | ಮಲೆನಾಡು ಟುಡೆ Jan 6, 2025
ಡಾ ಧನಂಜಯ್ ಸರ್ಜಿ ಹೆಸರಲ್ಲಿ ಹೊಸವರುಷ ಶುಭಾಶಯ ತಿಳಿಸಿ ಸ್ವೀಟ್ಸ್ ಬಾಕ್ಸ್ ಕಳುಹಿಸಿದ ಪ್ರಕರಣ ತಾರ್ಕಿಕ ಅಂತ್ಯಕಂಡಿದೆ. ಈ ಸಂಬಂಧ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ವಿಶೇಷ ಅಂದರೆ ಪ್ರಕರಣ ಸಾಕಷ್ಟು ಕುತೂಹಲ ಮೂಡಿಸಿದೆ. ಆರೋಪಿ ಸೌಹಾರ್ಧ ಪಟೇಲ್ ತನ್ನ ಸಿಟ್ಟನ್ನ ಮೂವರ ವಿರುದ್ಧ ಈ ರೀತಿಯಲ್ಲಿ ತೋಡಿಕೊಂಡಿದ್ದ ಎಂಬುದು ವಿಚಾರಣೆಯಲ್ಲಿ ಗೊತ್ತಾಗಿದೆ. ಎನ್ಇಎಸ್ ಕಾರ್ಯದರ್ಶಿ ನಾಗರಾಜ್ ಮಾನಸಿಕ ವೈದ್ಯರಾದ ಡಾ. ಅರವಿಂದ್ ಮತ್ತು ಡಾ. ಕೆ ಎಸ್ ಪವಿತ್ರರನ್ನ ಟಾರ್ಗೆಟ್ ಮಾಡಿಯೇ ಆರೋಪಿ ಸ್ವೀಟ್ಸ್ ಮೇಲೆ ಮಾತ್ರೆಯ ಹುಡಿಯೊಂದನ್ನ ಹಾಕಿ ಕಳುಹಿಸಿದ್ದ.
ಈತ ಕಾನೂನು ವಿದ್ಯಾರ್ಥಿಯಾಗಿದ್ದು, ಈತನ ಪ್ರೇಮ ಪ್ರಕರಣದ ಸಂಬಂಧ ಕಾರ್ಯದರ್ಶಿ ಬುದ್ದಿ ಹೇಳಿದ್ದಕ್ಕೆ ಅವರ ಮೇಲೆ ಸಿಟ್ಟು ಹೊಂದಿದ್ದ. ಮತ್ತು ಮಾನಸಿಕ ಸಮಸ್ಯೆಗಾಗಿ ಡಾ ಅರವಿಂದ್ ಮತ್ತು ಕೆ ಎಸ್ ಪವಿತ್ರರವರ ಬಳಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ಅವರ ಮೇಲೂ ಈತ ಸಿಟ್ಟಾಗಿದ್ದ. ಇದೇ ಕಾರಣಕ್ಕೆ ಡಾ ಸರ್ಜಿ ಹೆಸರಲ್ಲಿ ಸ್ವೀಟ್ಸ್ ಬಾಕ್ಸ್ ಕಳುಹಿಸಿ ಮೂವರ ವಿರುದ್ಧ ಸಿಟ್ಟು ತೋಡಿಕೊಂಡಿದ್ದ. ಪ್ರಕರಣದ ಮೂಲ ಹುಡುಕಿ ಹೊರಟ ಪೊಲೀಸರು ಆರೋಪಿಯನ್ನ ಬಂಧಿಸಿ ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
SUMMARY | Sweets box case in the name of Dr. Dhananjay Sarji, Sweets box case accused arrested, Shivamogga NES Institute, Kote Police Station

KEY WORDS | Sweets box case in the name of Dr Dhananjay Sarji, Sweets box case accused arrested, Shivamogga NES Institute, Kote Police Station