SHIVAMOGGA | MALENADUTODAY NEWS | ಮಲೆನಾಡು ಟುಡೆ Nov 12, 2024
ಶಿವಮೊಗ್ಗ ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನಿರ್ದೇಶಕರ ಸ್ಥಾನಗಳಿಗೆ ಎಲ್ಲಾ 38 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೆ ವಿಶೇಷ ಅಂದರೆ, ಈ ಎಲ್ಲಾ 38 ಮಂದಿಯೂ ಷಡಕ್ಷರಿ ಬಣದವರೇ ಆಗಿದ್ದಾರೆ. ಇದರೊಂದಿಗೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮೇಲಿನ ಷಡಾಕ್ಷರಿ ಹಿಡಿತ ಮುಂದುವರಿಯಲಿದೆ.
ವಿವಿಧ ಇಲಾಖೆಗೆ ಸೇರಿದ ಒಟ್ಟು 66 ಸ್ಥಾನಗಳಿಗೆ ಒಟ್ಟು 168 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿತ್ತು.
ಹಲವು ಮಂದಿ ನಾಮಪತ್ರ ಹಿಂಪಡೆದಿದ್ದು, 38 ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 28 ಸ್ಥಾನಗಳಿಗೆ ನವೆಂಬರ್ 16 ರಂದು ಮೀನಾಕ್ಷಿ ಭವನ ಬಳಿ ಇರುವ ಕೆಪಿಎಸ್ ಪಬ್ಲಿಕ್ ಶಾಲೆಯಲ್ಲಿ ಚುನಾವಣೆ ನಡೆಯಲಿದೆ.

ಇನ್ನೂ ಈ ಬಗ್ಗೆ ಮಾತನಾಡಿರುವ ಸಿಎಸ್ ಷಡಾಕ್ಷರಿ 38 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಇದು ಸಂಘದ ರಾಜ್ಯಾಧ್ಯಕ್ಷನಾಗಿ ಮತ್ತು ಜಿಲ್ಲಾಧ್ಯಕ್ಷನಾಗಿ ನಾನು ಮಾಡಿದ ಕೆಲಸವನ್ನು ನೌಕರರು ಮೆಚ್ಚಿರುವುದಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.
SUMMARY | All the 38 candidates have been elected unopposed to the posts of directors of the Shivamogga district branch of the Shivamogga State Government Employees Association.
KEYWORDS | elected unopposed to the posts , Shivamogga district branch, State Government Employees Association,