ಸರ್ಕಾರಿ ಕೆಲಸ ಪಡೆಯಲು ಸಿದ್ಧತೆ ನಡೆಸ್ತಿದ್ದೀರಾ? 400 ಕ್ಕೂ ಉದ್ಯೋಗಳಿಗೆ ಪರೀಕ್ಷೆ ನಡೆಸಲು KEA ಸಿದ್ಧತೆ | ಇಲ್ಲಿದೆ ಡಿಟೇಲ್ಸ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 6, 2025 ‌‌ 

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಾನೂರುಕ್ಕೂ ಹೆಚ್ಚು ವಿವಿಧ ಉದ್ಯೋಗಳಿಗೆ ಪರೀಕ್ಷೆ ನಡೆಸಲು ಸಿದ್ಧತೆ ನಡೆಸಿದೆ. ಈ ನಡುವೆ ತತ್ಸಂಬಂಧ ಅಧಿಸೂಚನೆ ಹೊರಡಿಸಲು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಇಲಾಖೆಗಳ/ನಿಗಮ/ಸಂಸ್ಥೆಗಳ ವಿವಿಧ ಹುದ್ದೆಗಳ ನೇಮಕಾತಿಗಾಗಿ ಬಂದಿರುವ ಪ್ರಸ್ತಾವನೆಯ ಪಟ್ಟಿಯನ್ನು ನೀಡಿದೆ. ಅಲ್ಲದೆ ಪರೀಕ್ಷೆ ಬರೆಯಲು ಬಯಸುವ ಅಭ್ಯರ್ಥಿಗಳು ತಯಾರಿ ಮಾಡಿಕೊಳ್ಳಲು ಸೂಚಿಸಿದೆ.  

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳು ಈ ಕೆಳಗೆ ಪ್ರಕಟಿಸಿರುವ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಬಯಸಿದಲ್ಲಿ, ಪಠ್ಯಕ್ರಮದಂತೆ ಅಭ್ಯಾಸಮಾಡಲು ತಿಳಿಸಿದೆ. ಹುದ್ದೆಗಳಿಗೆ ನಿಗದಿಯಾಗಿರುವ ಸರ್ಕಾರದಿಂದ ನೇಮಕಾತಿ ಅಧಿಸೂಚನೆ ಹೊರಡಿಸಲು ಅನುಮತಿಸಿದ ತಕ್ಷಣ ಪ್ರಾಧಿಕಾರ ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲು ಕ್ರಮವಹಿಸಲಾಗುವುದು ಮತ್ತು ಶೀಘ್ರವಾಗಿ ಪರೀಕ್ಷೆಗಳನ್ನು ಸಹ ನಡೆಸಲಾಗುವುದು ಎಂದು ತಿಳಿಸಿದೆ. 

Malenadu Today

Malenadu TodayMalenadu Today

Malenadu Today

Malenadu Today

SUMMARY | Details of recruitment exams to be conducted by Karnataka Examinations Authority in the coming days

KEY WORDS | Details of recruitment exams, Karnataka Examinations Authority,

Share This Article