SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
ಶಿವಮೊಗ್ಗ | ಸರ್ಕಾರಿ ಕೆಲಸ ಕೊಡಿಸುವ ಆಮೀಷವೊಡ್ಡಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಷ್ಟೆ ಅಲ್ಲದೆ ಅಸಭ್ಯ ಫೋಟೋಗಳನ್ನ ಬಯಲು ಮಾಡುವುದಾಗಿ ಬೆದರಿಕೆ ಒಡ್ಡಿದ ಆರೋಪಿಗೆ ಒಂದುವರೆ ಶಿಕ್ಷೆ ವಿಧಿಸಲಾಗಿದೆ.
2016ನೇ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯಾದ 62 ವರ್ಷದ ಪುರುಷ 27 ವರ್ಷದ ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಆ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೆ ಆಕೆಯ ಫೋಟೋಗಳನ್ನು ಇಟ್ಟುಕೊಂಡು, ಒಂದು ವೇಳೆ ದೂರು ನೀಡಿದರೆ ನಿನ್ನ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಶಿವಮೊಗ್ಗ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆನಂತರ ಪ್ರಕರಣದ ಚಾರ್ಜ್‌ಶೀಟ್ 2ನೇ JMFC ನ್ಯಾಯಾಲಯ, ಶಿವಮೊಗ್ಗಕ್ಕೆ ಸಲ್ಲಿಕೆಯಾಗಿತ್ತು.
ಈ ಸಂಬಂಧ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ಕಿರಣ್ ಕುಮಾರ್ ವಾದ ಮಂಡಿಸಿದ್ದರು. ಇದೀಗ ವಾದ ಪ್ರತಿವಾದ ಮುಗಿದು ಪ್ರಕರಣದಲ್ಲಿ ತೀರ್ಪು ಹೊರಬಿದ್ದಿದೆ. ನ್ಯಾಯಾಧೀಶರಾದ ಶ್ರೀಮತಿ ಶಾರದಾ ಕೊಪ್ಪದರವರು ಪ್ರಕರಣದ ಆರೋಪಿಗೆ 1 ವರ್ಷ 6 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು ರೂ 40,000/- ರೂ ಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ 36,000/- ರೂಗಳನ್ನು ನೊಂದ ಮಹಿಳೆಗೆ ನೀಡಲು ಆದೇಶಿಸಿದ್ದಾರೆ.
SUMMARY | man has been sentenced to one-and-a-half years in jail for sexually assaulting a woman on the pretext of getting her a government job and threatening to expose her photos. Shimoga 2 JMFC Court
KEYWORDS | man has been sentenced to one-and-a-half years in jail, sexually assaulting a woman on the pretext of government job, exposeindecent photos , Shimoga 2 JMFC Court