SHIVAMOGGA| MALENADUTODAY NEWS | ಮಲೆನಾಡು ಟುಡೆ Feb 18, 2025
ಶಿವಮೊಗ್ಗದ ಸಕ್ರೆಬೈಲ್‌ನಲ್ಲಿ ಹೋಟೆಲ್‌ವೊಂದರಲ್ಲಿ ಸ್ನೇಹಿತೆ ಜೊತೆ ಊಟ ಮಾಡುತ್ತಿದ್ದ ಯುವಕನನ್ನು ಹೆದರಿಸಿ, ಇಬ್ಬರನ್ನು ಆಟೋದಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಾಡಿಸಿ, ಬಳಿಕ ಹಣಕ್ಕಾಗಿ ಬೆದರಿಕೆ ಹಾಕಿದ ಹಾಗೂ ವಿಡಿಯೋ ಲೀಕ್ ಮಾಡುತ್ತೇವೆ ಎಂದು ಕಿರುಕುಳ ನೀಡಿದ ಪ್ರಕರಣ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸರು ಕ್ವಿಕ್ ಆಕ್ಷನ್ ಕೈಗೊಂಡಿದ್ದಾರೆ. ಈ ಸಂಬಂಧ ಮಲೆನಾಡು ಮುಖ್ಯವಾಗಿ ವರದಿ ಮಾಡಿತ್ತು ಅದರ ಲಿಂಕ್ ಇಲ್ಲಿದೆ ಸಕ್ರೆಬೈಲ್‌ನಲ್ಲಿ ನಡೆಯಿತೇ ಅನೈತಿಕ ಪೊಲೀಸ್ ಗಿರಿ | ಊಟಕ್ಕೆ ಹೋಗಿದ್ದ ಜೋಡಿಯನ್ನು ಆಟೋದಲ್ಲಿ ಸುತ್ತಾಡಿಸಿ ಕಿರುಕುಳ, ಹಲ್ಲೆ, ಬೆದರಿಕೆ?
ಪ್ರಕರಣದ ಸಂಬಂಧ ತುಂಗಾನಗರ ಪೊಲೀಸರು ತಮ್ಮದೆ ವಿಶೇಷ ತಂಡವನ್ನು ರಚಿಸಿಕೊಂಡಿದ್ದ ಪೊಲೀಸರು ಇಲಿಯಾಸ್ ಹೆಸರಿನ ಗ್ಯಾಂಗ್‌ನ ಮೂವರನ್ನು ಬಂಧಿಸಿದೆ. ಕ್ಲಾರ್ಕ್ ಪೇಟೆ ಇಲಿಯಾಜ್ ಅಲಿಯಾಸ್ ಇಲ್ಲು, ಚೀಲೂರು ಮೊಹಮ್ಮದ್ ವಾಸೀಮ್, ಅಣ್ಣಾನಗರ ಚಂದ್ರಶೇಖರ್ ಬಂಧಿತ ಆರೋಪಿಗಳು. ಇವರ ವಿರುದ್ಧ ಇನ್ನಷ್ಟು ವಿಚಾರಣೆಗೆ ಮುಂದಾಗಿರುವ ಪೊಲೀಸರು ಕೇಸ್‌ನಲ್ಲಿ ಕ್ವಿಕ್ ಆಕ್ಷನ್ ಕೈಗೊಂಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
SUMMARY | tunga nagara police arrest 3 accused in sakrebailu hotel case
KEY WORDS | tunga nagara police , sakrebailu hotel case