SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಿಂದ ಒಂದಷ್ಟು ಆನೆಗಳು ಬೇರೆ ಬಿಡಾರಕ್ಕೆ ಶಿಫ್ಟ್ ಆಗುತ್ತವಾ? ಹೌದು ಎನ್ನುತ್ತಿವೆ ಮೂಲಗಳು. ಸಕ್ರೆಬೈಲು ಆನೆ ಬಿಡಾರದಲ್ಲಿ ಸದ್ಯ 23 ಆನೆಗಳಿವೆ.
ಇಲ್ಲಿನ ಆನೆ ಬಿಡಾರದ ಸಾಮರ್ಥ್ಯ ಗರಿಷ್ಟ 13 ಆನೆಗಳು ಆದರೆ ಈ ಪ್ರಮಾಣಕ್ಕಿಂತ ಹೆಚ್ಚು ಆನೆಗಳು ಇಲ್ಲಿವೆ ಹೀಗಾಗಿ. ಹೆಚ್ಚುವರಿ ಆನೆಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಜಿಸಲಾಗುತ್ತಿರುವ ಆನೆ ಬಿಡಾರಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಸಂಬಂಧ ಆನೆ ಶಿಬಿರಗಳ ಕುಂದುಕೊರತೆ ಆಲಿಸಲು ನೇಮಿಸಲಾದ ಸಮಿತಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಮೂಲಗಳ ಮಾಹಿತಿ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯು ಸೇರಿದಂತೆ ರಾಜ್ಯದ ಇತರೇ ಶಿಬಿರಗಳಿಗೆ ಇಲ್ಲಿನ ಆನೆಗಳನ್ನ ಶಿಫ್ಟ್ ಮಾಡುವ ಸಾಧ್ಯತೆಯಿದೆ.
ಈ ಮೂಲಕ ತರಬೇತಿ ಹೊಂದಿದ ಆನೆಗಳನ್ನ ಬೇರೆಕಡೆಗಳಲ್ಲಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಇನ್ನೊಂದೆಡೆ ಇದಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.
SUMMARY | Will some elephants shift from Sakrebailu elephant camp in Shivamogga to another camp
KEYWORDS | elephants shift from Sakrebailu elephant camp, in Shivamogga to another camp