SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 29, 2025
ಶಿವಮೊಗ್ಗ | ಚೆನ್ನಬಸಪ್ಪನವರೆ ನಮ್ಮ ಸಚಿವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದೀರಿ. ಹೀಗೆ ಮಾತನಾಡುವುದು ಮುಂದುವರೆದರೆ ನಮ್ಮ ಕಾರ್ಯಕರ್ತರು ನಿಮಗೆ ಪಾಠ ಕಲಿಸುತ್ತಾರೆ ಎಂದು ಶಾಸಕ ಚನ್ಪಬಸಪ್ಪರವರ ವಿರುದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ವಾಗ್ದಾಳಿ ನಡೆಸಿದರು.
ಮಧು ಬಂಗಾರಪ್ಪನವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂಬ ಶಾಸಕರ ಹೇಳಿಕೆಗೆ ಪ್ರಸನ್ನಕುಮಾರ್ ಈ ಮೇಲಿನಂತೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊವೀಂದಾಪುರದ ಆಶ್ರಯ ಮನೆಗಳ ಯೋಜನೆ ತಂದಿದ್ದು ಕಾಂಗ್ರೆಸ್ ಸರ್ಕಾರ. ಗೋವಿಂದಾಪುರ ಆಶ್ರಯ ಮನೆಗಳಿಗೆ ವಿದ್ಯುತ್ ನೀರು ಸೇರಿದಂತೆ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳನ್ನು ಅಳವಡಿಸುವುದಿದೆ.
ಆದ್ದರಿಂದ ಆಶ್ರಮ ಮನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಬಾರದೆಂಬ ಕಾರಣಕ್ಕೆ ನಮ್ಮ ಸಚಿವರು ಉದ್ಘಾಟನೆಗೆ ತಡ ಮಾಡುತ್ತಿದ್ದಾರೆ. ಚನ್ನಬಸಪ್ಪನವರೇ ಆ ಉದ್ಘಾಟನೆ ನಿಮ್ಮ ಅವಧಿಯಲ್ಲಿಯೇ ಆಗುತ್ತದೆ. ಅದರ ಬಗ್ಗೆ ಯಾವುದೇ ಭಯ ಬೇಡ. ಸಚಿವರ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅದರಿಂದ ನಿಮಗೆ ಗೌರವ ಸಿಗಲ್ಲ. ಹೀಗೆ ಮಾತನಾಡುವುದು ಮುಂದುವರೆದರೆ ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ ಎಂದರು.
ಶರಾವತಿ ಸಂತ್ರಸ್ತ್ರರ ಸಮಸ್ಯೆಗೆ ಕಾರಣ ಬಿಜೆಪಿ
ಕಳೆದ 60 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಏನು ಅಭಿವೃದ್ದಿ ಮಾಡಿದೆ ಎಂದು ಸಂಸದ ಬಿವೈ ರಾಘವೇಂದ್ರರವರು ಕೇಳುತ್ತಾರೆ. ಕಾಂಗ್ರೆಸ್ ಏನು ಅಭಿವೃದ್ದಿ ಮಾಡಿದೆ ಎಂಬುವುದು ದೇಶದ ಜನರ ಮುಂದೆ ಇದೆ. ನಿಮ್ಮದೇ ಆದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದು ಹತ್ತು ವರ್ಷ ಆಗಿದೆ ಆದರೂ ವಿಐಎಸ್ಎಲ್ ಅನ್ನು ಅಭಿವೃದ್ದಿ ಪಡಿಸಿಲ್ಲ. ಶರಾವತಿ ಸಂತ್ರಸ್ತ್ರರ ಸಮಸ್ಯೆಗೆ ಕಾರಣ ಕಾಂಗ್ರೆಸ್ ಅಲ್ಲ ಬಿಜೆಪಿ. ಮಧು ಬಂಗಾರಪ್ಪ ನವರು ಶರಾವತಿ ಸಂತ್ರಸ್ತ್ರರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ನಮ್ಮ ಸರ್ಕಾರ ಶರಾವತಿ ಸಂತ್ರಸ್ತ್ರರ ಪರವಾಗಿದೆ ಎಂದರು.
SUMMARY | Chennabasappa, you are speaking ill of our minister. If you continue to speak like this, our workers will teach you a lesson,” congress district president Prasanna Kumar said.
KEYWORDS | Channabasappa, Prasanna Kumar, congress, bjp,