SHIVAMOGGA | MALENADUTODAY NEWS | Apr 24, 2024
ಹವಾಮಾನ ಇಲಾಖೆಯ ಮುನ್ಸೂಚನೆಯಂತೆಯೆ ಶಿವಮೊಗ್ಗವೂ ಸೇರಿದಂತೆ ಹಲೆವೆಡೆ ಬಿಸಿಲು ಸುಡುತ್ತಿದೆ. ಉಷ್ಣಾಂಶ ಮಾಪನದ ಪ್ರಕಾರ 2 ಗಂಟೆಯ ಸುಮಾರಿ ಶಿವಮೊಗ್ಗದಲ್ಲಿ ಬರೋಬ್ಬರಿ 38.10 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಇನ್ನೂ ಸಂಜೆ ಐದು ಗಂಟೆ ಹೊತ್ತಿಗೆ 28.00 ಡಿಗ್ಸಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಅಲ್ಲದೆ ರಾತ್ರಿ 24 ರಿಂದ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆಯ ಬರುವ ಹಾಗಿದ್ಯಾ?
ಐಎಂಡಿ ಬೆಂಗಳೂರು ನೀಡುವ ಜಿಲ್ಲಾವಾರು ಎಚ್ಚರಿಕೆಯ ಸೂಚನೆಯಲ್ಲಿ ಶಿವಮೊಗ್ಗದ ನಕಾಶೆಯನ್ನ ಹಳದಿ ಬಣ್ಣದಲ್ಲಿ ನಮೂದಿಸಲಾಗಿದೆ. ಇದರರ್ಥ ಶಿವಮೊಗ್ಗದಲ್ಲಿ ಮಳೆಯಾಗುವ ಸೂಚನೆ ಇದೆ ಎಂದು. ಡೈಲಿ ಬುಲೆಟಿನ್ ವರದಿ ಪ್ರಕಾರ, ಜಿಲ್ಲೆಯ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆಯಂತೆ. ಉಳಿದಂತೆ ಈ ವಾರವಿಡಿ ಬಿಸಿಲ ಬೇಗೆ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮುಂಗಾರು ಪೂರ್ವದ ಗುಡುಗು ಸಿಡಿಲು ಗಾಳಿಗೆ ಹೊರತುಪಡಿಸಿ ಮಳೆಯಬ್ಬರ ಸದ್ಯಕ್ಕಿಲ್ಲ ಎನ್ನುತ್ತದೆ ಮನ್ಸೂಚನೆ.