SHIVAMOGGA | MALENADUTODAY NEWS | ಮಲೆನಾಡು ಟುಡೆ Oct 23, 2024
ಶಿವಮೊಗ್ಗದಲ್ಲಿ ರೌಡಿಸಂ ಶಾಂತವಾಗಿದೆಯಂತಾದರೂ ಸಹ ಪುಡಿರೌಡಿಗಳ ಅಟ್ಟಹಾಸ ಎಲ್ಲೆ ಮೀರಿದೆ. ಪೊಲೀಸರ ಏರಿಯಾ ಡಾಮಿನೇಷನ್ ಹೊರತಾಗಿ ಪುಡಿರೌಡಿಗಳ ಹಾವಳಿಗಳು ಇಲಾಖೆಗೆ ಗೊತ್ತಾದಂತಿಲ್ಲ. ಸರ್ಕಲ್‌ಗಳಲ್ಲಿ ಸಿಗ್ನಲ್‌ನಲ್ಲಿ ನಿಂತವರಿಗೆ ಹೆದರಿಸುವುದರಿಂದ ಹಿಡಿದು ಏರಿಯಾದಲ್ಲಿ ಓಡಾಡುವರನ್ನ ಅಡ್ಡಗಟ್ಟುವ ತನಕ ಸಣ್ಣ ಪುಟ್ಟ ಕಿರಿಕ್‌ಗಳನ್ನ ಮಾಡುತ್ತಿರುವ ಪುಡಿ ಆಸಾಮಿಗಳ ವರ್ತನೆ ಪೊಲೀಸರ ಗಮನಕ್ಕೆ ಇದೆ.
ಇನ್ನೂ ಇದಕ್ಕೆ ಪೂರಕವೆಂಬಂತೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಲಿಮಿಟ್‌ನಲ್ಲಿ ಘಟನೆ ನಡೆದಿದೆ. ಜೈಸನ್ ಎಂಬಾತ ನೀಡಿದ ದೂರಿನನ್ವಯ ದಾಖಲಾದ FIR ನಲ್ಲಿ ಸಲಗ, ಕತ್ತೆ ಕಾರ್ತಿಕ್, ವಿಜಯ್ ಸೇರಿದಂತೆ 10 ಮಂದಿ ವಿರುದ್ಧ ಕೇಸ್ ಆಗಿದೆ. THE BHARATIYA NYAYA SANHITA (BNS), 2023 (U/s-189(2),191(2),191(3),126(2),115(2),118(1),109(1),137(2),308(2),190) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೈಸನ್ ಎಂಬಾತ ಗಾಡಿಕೊಪ್ಪದ ಸಮೀಪ ಟೀ ಸಿಗರೇಟ್ ತಗೊಳ್ಳುತ್ತಿದ್ದಾಗ ಅಲ್ಲಿಗೆ ಬಂದ ಕತ್ತೆ ಕಾರ್ತಿಕ್, ಸಲಗ ಹಾಗೂ ಆತನ ಹುಡುಗರು, ಅನಾಮತ್ತಾಗಿ ಜೈಸನ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನನ್ನ ಅಪರಿಹರಿಸಿ ವಾಜಪೇಯಿ ಬಡಾವಣೆಗೆ ಕರೆದೊಯ್ದು ಅಲ್ಲಿಯು ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಗಮನಿಸಿದ ಬೆನ್ನಲ್ಲೆ ಎಲ್ಲರೂ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಕತ್ತೆ ಕಾರ್ತಿಕ್‌ನ ಬರ್ತ್‌ಡೇ ಹಿನ್ನೆಲೆಯಲ್ಲಿ ರಿವೆಂಜ್ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.
SUMMARY | Doddapete police station in Shivamogga case , FIR was registered on the basis of a complaint filed by one Jaison against 10 people, including the salaga, katte Karthik and Vijay.
KEYWORDS | Doddapete police station in Shivamogga, FIR was registered , Jaison salaga, katte Karthik and Vijay.