ಶಿವಮೊಗ್ಗ ಸಿಟಿಯಲ್ಲಿ ಆಟೋ ಮೀಟರ್‌ ವಿಚಾರಕ್ಕೆ ಮಹತ್ವದ ಮೀಟಿಂಗ್

13

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 11, 2025 ‌‌   ‌

ಶಿವಮೊಗ್ಗ ನಗರದಲ್ಲಿ ಆಟೋ ಮೀಟರ್‌ ಕಡ್ಡಾಯಗೊಳಿಸಲಾಗಿದೆ. ಆದಾಗ್ಯು ಆಟೋ ಮೀಟರ್‌ಗಳನ್ನು ಅಳವಡಿಸದೆ ಆಟೋಗಳನ್ನು ಓಡಿಸುತ್ತಿರುವ ಬಗ್ಗೆ ಈಗಾಗಲೇ ಸಾಲು ಸಾಲು ದೂರುಗಳು ಕೇಳಿಬಂದಿದ್ದವು. 

ಇದರ ನಡುವೆ ಶಿವಮೊಗ್ಗ ಸಂಚಾರಿ ಪೊಲೀಸರು ಆಟೋ ಚಾಲಕರ ಜೊತೆ ಸಭೆ ನಡೆಸಿದೆ. ನಗರದ ಎಲ್ಲಾ ಆಟೋ ಮಾಲೀಕರು ಮತ್ತು ಚಾಲಕರಿಗೆ ಸಭೆಯನ್ನು ನಡೆಸಿದ ಟ್ರಾಫಿಕ್‌ ಪೊಲೀಸರು, ಆಟೋ ಮೀಟರ್‌ ಅಳವಡಿಕೆ ಬಗ್ಗೆ ಮಹತ್ವದ ಸೂಚನೆ ನೀಡಿದ್ದಾರೆ. 

ಸಭೆಯಲ್ಲಿ ಹಾಜರಾರಿದ್ದ ಆಟೋ ಮಾಲೀಕರ ಮತ್ತು ಚಾಲಕರುಗಳ ಸಮಸ್ಯೆಗಳನ್ನು ಆಲಿಸಿ, ಆಟೋ ಚಾಲಕರು ಆಟೋದಲ್ಲಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಾಗ ಕಡ್ಡಾಯವಾಗಿ ಮೀಟರ್ ಹಾಕುವುದು ಮತ್ತು  ಎಲ್ಲಾ ದಾಖಲೆಯನ್ನು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳುವುದಕ್ಕ ಸೂಚಿಸಿದೆ.

ಇದಷ್ಟೆ ಅಲ್ಲದೆ ಇವತ್ತು ಶಿವಮೊಗ್ಗದ ಅಕ್ಕಮಹಾದೇವಿ ಸರ್ಕಲ್ ನಲ್ಲಿ ( ಉಷಾ ನರ್ಸಿಂಗ್ ಹೋಂ ಸರ್ಕಲ್)  ಸಾರ್ವಜನಿಕ ವಾಹನಗಳ  ಸುಗಮ ಸಂಚಾರಕ್ಕೆ ಅಡಚಣೆ  ಉಂಟುಮಾಡುತ್ತಿದ್ದ ಹಳೆಯ ಟ್ರಾಫಿಕ್ ಸಿಗ್ನಲ್ ಲೈಟ್ ಕಂಬಗಳನ್ನು ತೆಗೆಸುವ ಮೂಲಕ  ವಾಹನಗಳ ಸುಗಮ ಸಂಚಾರ ಅನುವು  ಮಾಡಿಕೊಟ್ಟಿದೆ. @Shivamogga_SP

SUMMARY | Shivamogga Traffic Police holds meeting of auto drivers in Shivamogga city

KEY WORDS |‌  Shivamogga Traffic Police , meeting of auto drivers ,Shivamogga city

Share This Article