SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 26, 2024 | Flying Ornate Snake | ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಗರ ಕಚೇರಿಯ ಬಳಿಯಲ್ಲಿ ಹಾರುವ ಹಾವು ಪತ್ತೆಯಾಗಿದೆ.
ಸಾಮಾನ್ಯವಾಗಿ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮತ್ತು ನರಸಿಂಹರಾಜಪುರ ಭಾಗದಲ್ಲಿ ಕಂಡು ಬರುವ ಹಾರುವ ಹಾವೊಂದು ಕುವೆಂಪು ವಿವಿ ನಗರ ಕಚೇರಿಯ ಆವರಣದಲ್ಲಿ ಕಾಣಿಸಿಕೊಂಡಿತ್ತು.
ಈ ಬಗ್ಗೆ ಸ್ಥಳೀಯರು ಉರಗ ಸಂರಕ್ಷಕರಾದ ಸ್ನೇಕ್ ವಿಕ್ಕಿ ಹಾಗೂ ಜಯಂತ್ ಬಾಬುರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅವರುಗಳು ಹಾವನ್ನು ಸುರಕ್ಷಿತವಾಗಿ ಹಿಡಿದು, ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಈ ಹಾವು ಚಿಕ್ಕಮಗಳೂರುನಿಂದ ಬರುವವರ ಕಾರಿನಲ್ಲಿ ಬಂದಿರುವ ಸಾಧ್ಯತೆ ಇದೆ ಸಂರಕ್ಷಕರು ಅನುಮಾನಿಸಿದ್ದಾರೆ.