SHIVAMOGGA | MALENADUTODAY NEWS | ಮಲೆನಾಡು ಟುಡೆ Feb 23, 2025
ಶಿವಮೊಗ್ಗ ರೈಲ್ವೆ ಸಂರಕ್ಷಣಾ ಪಡೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರೈಲ್ವೆ ಇಲಾಖೆಯಲ್ಲಿ ಗಮನ ಸೆಳೆಯುತ್ತಿದೆ. ಆಪರೇಷನ್ ನನ್ನೆ ಪರಿಷ್ಠೆ ಅಭಿಯಾನದ ಅಡಿಯಲ್ಲಿ ಅಪ್ತಾಪ್ತರನ್ನು ರಕ್ಷಣೆ ಮಾಡುತ್ತಿರುವ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ, ಇದೀಗ ಮತ್ತೆರಡು ಮಾನವೀಯ ಘಟನೆಗೆ ಸಾಕ್ಷಿಯಾಗಿದೆ.
ಘಟನೆ 1 | ಮಹಿಳೆಯ ಮಾಂಗಲ್ಯ ಸರ ವಾಪಸ್ ಮಾಡಿದ ಸಿಬ್ಬಂದಿ
ಶಿವಮೊಗ್ಗ ಮೈಸೂರು ಇಂಟರ್ ಸಿಟಿ ಟ್ರೈನ್ 16206 MYS-SMET Inter City express ನಲ್ಲಿ ಕಳೆದ 22 ನೇ ತಾರೀಖು ಮೈಸೂರಿನ ಮಹಿಳೆಯೊಬ್ಬರು ತಮ್ಮ ಪತಿಯ ಜೊತೆಗೆ ಶಿವಮೊಗ್ಗಕ್ಕೆ ಬಂದಿದ್ದರು. ಅವರು ನಿಲ್ದಾಣದಿಂದ ಇಳಿದು ಹೊರಕ್ಕೆ ಹೋಗುವ ಸಂದರ್ಭದಲ್ಲಿ ಕತ್ತಿನಲ್ಲಿದ್ದ ಮಾಂಗಲ್ಯ ಸರ, ಶಿವಮೊಗ್ಗ ರೈಲು ನಿಲ್ದಾಣದ ಫ್ಲಾಟ್ ಫಾರಮ್ ನಂಬರ್ 1 ರಲ್ಲಿ, ನಿರ್ಮಾಣ ಹಂತದ ಆರ್‌ಪಿಎಫ್ ಆಫೀಸ್ ಬಳಿ ಬಿದ್ದು ಹೋಗಿತ್ತು. ಇದೇ ಸಂದರ್ಭದಲ್ಲಿ ರೌಂಡ್ಸ್ ನಲ್ಲಿದ್ದ ಇನ್‌ಸ್ಪೆಕ್ಟರ್ ಬಿಕೆ ಪ್ರಕಾಶ್ ಹಾಗೂ ಎಸ್‌ಐ ಅನ್ವರ್ ಸಾಧಿಕ್ ರವರ ತಂಡಕ್ಕೆ ಈ ಮಾಂಗಲ್ಯ ಸರ ಸಿಕ್ಕಿದೆ. ಅದನ್ನು ಜಪ್ತು ಮಾಡಿದ ಟೀಂ , ಆರ್‌ಪಿಎಫ್ ಆಫೀಸ್‌ನಲ್ಲಿ ಸರವನ್ನು ಇಟ್ಟು ವಿಚಾರಣೆ ಆರಂಭಿಸಿತ್ತು. ಬಳಿಕ ಅದು ಮೈಸೂರಿನ ಮಹಿಳೆಗೆ ಸೇರಿದ್ದು ಎಂದು ತಿಳಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ವಾಪಸ್ ನೀಡಿದ್ದಾರೆ. ರೈಲ್ವೆ ರಕ್ಷಣಾ ದಳ ಸಿಬ್ಬಂಧಿ ತಮ್ಮ ಒಂದು ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ತಾಳಿಸರವನ್ನು ವಾಪಸ್ ನೀಡಿದ್ದಕ್ಕೆ ಮಹಿಳೆಯು ಸಂತಸ ವ್ಯಕ್ತಪಡಿಸಿದ್ದು, ಮೌಲ್ಯಯುತವಾದ ಕೆಲಸದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಘಟನೆ 2 | ಗಾಯಾಳು ನೆರವಿಗೆ ನಿಂತ ರೈಲ್ವೆ ರಕ್ಷಣಾ ದಳ
ಕಳೆದ 20 ನೇ ತಾರೀಖು ಹೊಸನಗರದ 65 ವರ್ಷದ ನಿವಾಸಿಯೊಬ್ಬರು ಯಶವಂತಪುರ ಶಿವಮೊಗ್ಗ ಟ್ರೈನ್ 16580 SMET-YPR Express ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು. ಶಿವಮೊಗ್ಗ ನಿಲ್ದಾಣದಲ್ಲಿ ಇಳಿದ ಬಳಿಕ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ. ಹೀಗಾಗಿ ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದರು. ಅವರನ್ನು ಗಮನಿಸಿದ ಎಸ್‌ಐ ಅನ್ವರ್ ಸಾದಿಕ್, ಸಿಬ್ಬಂದಿ ಶಫಿವುಲ್ಲಾ, ರಹಮತ್ತುನ್ನಿಸಾ ಬೇಗಮ್ ರವರ ತಂಡ ವಿಚಾರಿಸಿದೆ. ಈ ವೇಳೆ ಅಸ್ವಸ್ಥಗೊಂಡಿದ್ದ ವ್ಯಕ್ತಿಗೆ ತಕ್ಷಣವೇ ತುರ್ತು ಚಿಕಿತ್ಸೆ ಅಗತ್ಯವಿರುವುದು ಗೊತ್ತಾಗಿದೆ. ಹಾಗಾಗಿ ಕೂಡಲೇ 108 ಆಂಬುಲೆನ್ಸ್‌ನ್ನು ತರಿಸಿಕೊಂಡು ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಸಂಬಂಧಿತ ಪ್ರಯಾಣಿಕರಿಗೆ ಸೇರಿದ್ದ ಚಿನ್ನ ಹಾಗೂ ಸಾಮಗ್ರಿಗಳುನ್ನ ಆರ್‌ಪಿಎಫ್ ಕಚೇರಿಯಲ್ಲಿ ಸುರಕ್ಷಿತವಾಗಿ ಇರಿಸಿ, ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.
SUMMARY | smg rpf staff secured gold chain of mysore woman
KEY WORDS | smg rpf staff ,secured gold chain of mysore woman