SHIVAMOGGA | MALENADUTODAY NEWS | ಮಲೆನಾಡು ಟುಡೆ Nov 13, 2024
ಶಿವಮೊಗ್ಗ | ಮಹತ್ವದ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸರು ನಾಲ್ವರು ಅಪ್ರಾಪ್ತರನ್ನ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರೈಲ್ವೆ ಪೊಲೀಸರು ಬಾಲಕರನ್ನ ರಕ್ಷಣೆ ಮಾಡಿದ್ದಾರೆ.
ಅಪ್ರಾಪ್ತ ಬಾಲಕರು 07,09 ಹಾಗೂ 13 ವರುಷದವರಾಗಿದ್ದಾರೆ. ಇವರ ಶಿವಮೊಗ್ಗ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಮ್ ಒಂದರಲ್ಲಿ ನಿಂತಿದ್ದರು. ಇವರನ್ನ ಕಂಡ ರೈಲ್ವೆ ಪೊಲೀಸ್ ಸಿಬ್ಬಂದಿ ಬಾಲಕರನ್ನ ವಿಚಾರಿಸಿದ್ದಾರೆ. ಆ ಬಳಿಕ ಅವರನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ಅವರುಗಳ ಪೋಷಕರ ಸುಪರ್ದಿಗೆ ಒಪ್ಪಿಸುವ ಸಲುವಾಗಿ ಮಕ್ಕಳನ್ನು ಸುರಭಿ ಕೇಂದ್ರಕ್ಕೆ ರವಾನಿಸಿ, ತಾತ್ಕಾಲಿಕ ನೆಲೆ ಒದಗಿಸಲಾಗಿದೆ.
ಈ ಸಂಬಂಧ ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದು, #OperationNanheFariste ಅಡಿಯಲ್ಲಿ ಕಾರ್ಯಾಚರಣೆ ಕೈಗೊಂಡಿರುವುದಾಗಿ ತಿಳಿಸಿದೆ.
SUMMARY | four boys were rescued by the railway police in an operation at Shivamogga railway station.
KEYWORDS | four boys were rescued, railway police ,Shivamogga railway station, #OperationNanheFariste