SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಮೈಕ್ರೋ ಫೈನಾನ್ಸ್ ಮತ್ತೊಬ್ಬರ ಜೀವ ತೆಗೆದಿದೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕುನಲ್ಲಿ ಶಿಕ್ಷಕಿಯಾಗಿದ್ದ ಪುಷ್ಪಲತಾ ಎಂಬ 46 ವರುಷದ ಮಹಿಳೆ ನಿನ್ನೆದಿನ ತುಂಗಭದ್ರಾ ನದಿಗೆ ಹಾರಿದ್ದಾರೆ ಎನ್ನಲಾಗಿದೆ.ಇವರು ಹಾವೇರಿ ಜಿಲ್ಲೆಯ ತುಮ್ಮಿನಕಟ್ಟೆ ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ಹೊನ್ನಾಳಿಯ ರಾಘವೇಂದ್ರ ಮಠದ ಬಳಿ ನಿನ್ನೆದಿನ ತುಂಗಭದ್ರಾ ನದಿಗೆ ಹಾರಿದ್ದಾರೆ. ಇವರಿಗಾಗಿ ಹುಡುಕಾಟ ನಡೆಯುತ್ತಿದೆ. ಹೊಸದಾಗಿ ಮನೆ ಕಟ್ಟಿಸಿದ್ದ ಇವರು ಶಿವಮೊಗ್ಗದ ಫೈನಾನ್ಸ್ ಒಂದರಲ್ಲಿ 35ರಿಂದ 40 ಲಕ್ಷ ರೂಪಾಯಿ ಸಾಲ ಮಾಡಿದ್ದರು ಎನ್ನಲಾಗಿದೆ. ಇನ್ನೂ ಘಟನೆ ಬಗ್ಗೆ ಮಾತನಾಡಿರುವ ದಾವಣಗೆರೆ ಎಸ್‌ಪಿ ಉಮಾಪ್ರಶಾಂತ್ ಶಿಕ್ಷಕಿ ಪುಷ್ಪಲತಾ ನದಿಗೆ ಹಾರಿರುವುದಾಗಿ ವಿಷಯ ತಿಳಿದುಬಂದಿದೆ. ಆದರೆ ಸ್ಪಷ್ಟವಾಗಿಲ್ಲ. ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಪ್ರಕರಣದ ತನಿಖೆಯು ನಡೆಯುತ್ತಿದ್ದು, ಸದ್ಯದಲ್ಲಿಯೇ ಎಲ್ಲಾ ವಿಚಾರವೂ ತಿಳಿದುಬರಲಿದೆ ಎಂದಿದ್ದಾರೆ.
SUMMARY | Haveri school teacher who had taken a loan from a finance company in Shivamogga is suspected of jumping into the Tungabhadra river in Honnali, Davangere district.
KEY WORDS | Haveri school teacher , loan from a finance company , Shivamogga, Tungabhadra river in Honnali, Davangere district