SHIVAMOGGA | MALENADUTODAY NEWS | ಮಲೆನಾಡು ಟುಡೆ | Apr 9, 2025
ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತ ಹಾಗೂ ದಿ ಹಿಂದು ಪತ್ರಿಕೆಯ ಹಿರಿಯ ಪತ್ರಕರ್ತರಾದ ಜಿ.ಟಿ.ಸತೀಶ್ರವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಬುಧವಾರ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಎನ್ ಮಂಜುನಾಥ್ ಮಾತನಾಡಿ ಅರ್ಹತೆ, ಯೋಗ್ಯತೆ ಇದ್ದ ಕಾರಣ ಜಿ.ಟಿ.ಸತೀಶ್ ಅವರಿಗೆ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ದೊರೆತಿದೆ, ಅವರ ಪತ್ರಿಕೋದ್ಯಮ ಸೇವೆ ಮುಂದುವರೆಯಲಿ ಎಂದರು. ಹೊನ್ನಾಳಿ ಚಂದ್ರಶೇಖರ್ ಜಿ.ಟಿ.ಸತೀಶ್ ಬಗ್ಗೆ ಪರಿಚಯ ಮಾಡಿ ಮಾತನಾಡಿ ಸತೀಶ್ ಮೂಲತಃ ಚಿತ್ರದುರ್ಗ ಮೂಲದವರಾಗಿದ್ದು, ಮೂರು ಜಿಲ್ಲೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅತ್ಯಂತ ಸೌಲಭ್ಯ ವಂಚಿತರ, ಮಾನವೀಯ ವರದಿಗಳನ್ನು ಮಾಡಿದ್ದಾರೆ. ಇದರ ಆಧಾರದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ ನೀಡಿದ್ದಾರೆ. 1760 ಕಿಮೀ ನಡೆದುಕೊಂಡ ಹೋದ ಕತೆಯನ್ನು ಅನುವಾದ ಮಾಡಿದ್ದಾರೆ. ಅವರ ವರದಿಗಳನ್ನು ನೋಡಿದರೆ ಅವರ ಮನೋಭಾವ ಅರ್ಥವಾಗುತ್ತದೆ ಎಂದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ ಸತೀಶ್ ಅವರು ಇನ್ನಷ್ಟು ಎತ್ತರಕ್ಕೆ ಬೆಳಯಲಿ ಎಂದು ಆಶಿಸಿದರು. ಸನ್ಮಾನಿಸಿ ಸ್ವೀಕರಿಸಿ ಮಾತನಾಡಿದ ಜಿ.ಟಿ.ಸತೀಶ್ ಸನ್ಮಾನ ಸ್ವೀಕರಿಸೋಕೆ ಮುಜುಕರ ಆಗುತ್ತದೆ, ಸನ್ಮಾನ ಬೇಡ ಅಂತಾ ಹೇಳಿದ್ರು ಇಲ್ಲಿಗೆ ನನ್ನನ್ನ ಕರೆಸಿ ಸನ್ಮಾನಿಸಿರೋದು ಖುಷಿ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಖಜಾಂಚಿ ಜೇಸುದಾಸ್.ಪಿ, ಸಂತೋಷ್ ಕಾಚಿನಕಟ್ಟೆ, ಗಜೇಂದ್ರಸ್ವಾಮಿ, ಗೋಪಾಲ್ ಯಡಗೆರೆ, ಹುಲಿಮನೆ ತಿಮ್ಮಪ್ಪ ಮತ್ತಿತ್ತರು ಉಪಸ್ಥಿತರಿದ್ದರು.
SUMMARY | G.T. Satish, a senior journalist with The Hindu and a recipient of the Development Journalism Award, was felicitated by the Shivamogga Press Trust on Wednesday.
KEYWORDS | G.T. Satish,senior journalist, Shivamogga Press Trust,