SHIVAMOGGA | MALENADUTODAY NEWS | ಮಲೆನಾಡು ಟುಡೆ Jan 11, 2025
ಶಿವಮೊಗ್ಗ ಸಿಟಿಯಲ್ಲಿನ ಭದ್ರತೆಯ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ಈಗಾಗಲೇ ಏರಿಯಾ ಡಾಮಿನೆಷನ್, ಕಾಲ್ನಡಿಗೆ ಬಂದೋಬಸ್ತ್‌ಗಳನ್ನ ನಡೆಸ್ತಾ ಬಂದಿದೆ. ಅಲ್ಲದೆ ಸೂಕ್ಷ್ಮ ಪ್ರದೇಶಗಳಲ್ಲಿ ಅನುಮಾಸ್ಪದ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಂಡು ಸಾಲು ಸಾಲು ಪಿಟ್ಟಿಕೇಸ್‌ಗಳನ್ನು ಹಾಕುತ್ತಿದೆ.
ಇವೆಲ್ಲದರ ಜೊತೆಯಲ್ಲಿ ಇದೀಗ ಶಿವಮೊಗ್ಗ ನಗರದಲ್ಲಿ ಚೀತಾ ಬೈಕ್‌ಗಳನ್ನು ಇನ್ನಷ್ಟು ಅಲರ್ಟ್ ಆಗಿ ಶಿವಮೊಗ್ಗ ಪೊಲೀಸ್ ಇಲಾಖೆ ರೋಡಿಗೆ ಇಳಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನ ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ರಿಲೀಸ್ ಮಾಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅವರು ಚೀತಾ ಬೈಕ್‌ಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಏನು ಮಾಡುತ್ತೆ ಚೀತಾ?!
ಚೀತಾ ಬೈಕ್‌ಗಳಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸುತ್ತುತ್ತಲೇ ಇರುತ್ತಾರೆ. ಅನುಮಾನಸ್ಪದ ಚಟುವಟಿಕೆ ಹಾಗೂ ಅನುಮಾನಸ್ಪದ ವ್ಯಕ್ತಿಗಳ ಬಗ್ಗೆ ಅವರು ಗಮನ ಕೊಡುತ್ತಾರೆ. ಅಲ್ಲದೆ ಯಾವುದೇ ಅನಿರೀಕ್ಷಿತ ಘಟನೆಗಳಿಗೆ ತುರ್ತಾಗಿ ಹಾಗೂ ಮೊದಲಿಗೆ ಸ್ಪಂದಿಸುತ್ತಾರೆ. ಚೀತಾ ಬೈಕ್‌ಗಳಲ್ಲಿ ಸೈರನ್ , ವಾಕಿ, ಸೇರಿದಂತೆ ಪೊಲೀಸ್ ಅಧಿಕಾರಿಗಳಿಗೆ ಅವಶ್ಯಕವಾಗಿರುವ ಸಾಮಗ್ರಿಗಳಿರುತ್ತದೆ. ಅಲ್ಲದೆ ಇಲಾಖೆಯ ಟಫ್ ಸಿಬ್ಬಂದಿ ಚೀತಾ ಬೈಕ್‌ಗಳನ್ನು ಚಲಾಯಿಸುತ್ತಾ, ತಮ್ಮ ಓಡಾಟದ ವೇಳೆ ಏರಿಯಾಗಳಲ್ಲಿನ ಚಟುವಟಿಕೆಗಳ ಮೇಲೆ ಗಮನ ಹರಿಸುತ್ತಾರೆ.
— SP Shivamogga (@Shivamogga_SP) January 10, 2025
SUMMARY | Shivamogga SP Mithun Kumar and Shivamogga Police Department, Cheetah bikes running in Shivamogga city
KEY WORDS | Shivamogga SP Mithun Kumar ,Shivamogga Police Department, Cheetah bikes running in Shivamogga city