SHIVAMOGGA | MALENADUTODAY NEWS | ಮಲೆನಾಡು ಟುಡೆ Jan 17, 2025
ಶಿವಮೊಗ್ಗ ನಗರ ಪಾಲಿಕೆಯಲ್ಲಿ ನಿನ್ನೆ ದಿನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಕೌಂಟ್ ಮ್ಯಾನೇಜರ್ ಸಿದ್ದೇಶ್‌ರನ್ನ ಖೆಡ್ಡಾಕ್ಕೆ ಕೆಡವಿದ್ದರು. ಈ ವಿಚಾರದ ಇನ್ನೊಂದಿಷ್ಟು ಅಪ್‌ಡೇಟ್ ಲಭ್ಯವಾಗಿದ್ದು, ಪ್ರಕರಣದಲ್ಲಿ ಸಿದ್ದೇಶ್ ಗುತ್ತಿಗೆದಾರರನಿಂದ ನಾಲ್ಕು ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಎಂಜಿನಿಯರ್ ಕಟ್ಟಡದ ಮೇಲೆ ಶೆಡ್ ಅಳವಡಿಕೆ ಕಾಮಗಾರಿಯನ್ನು ಸುನಿಲ್ ಎಂಬ ಗುತ್ತಿಗೆದಾರರು ಕೈಗೊಂಡಿದ್ದರು. ಇದರ ಬಿಲ್ ₹3.5 ಲಕ್ಷ ಆಗಿತ್ತು. ಅದನ್ನು ಪಾವತಿಸಲು ಒಟ್ಟಾರೆ ಬಿಲ್ ಅಮೌಂಟ್‌ನ ಶೇ 4ರಷ್ಟು ಕಮಿಷನ್ ಕೊಡುವಂತೆ ಅಕೌಂಟ್ ಮ್ಯಾನೇಜರ್ ಸಿದ್ದೇಶ್ ಕೇಳಿದ್ದರು. ಅಂದರೆ ಒಟ್ಟು ₹11,500 ಲಂಚ ನೀಡುವಂತೆ ಪಾಲಿಕೆ ಲೆಕ್ಕಶಾಖೆಯಲ್ಲಿ ಕೆಲಸ ಮಾಡುತ್ತಿರುವ ವ್ಯವಸ್ಥಾಪಕ ಸಿದ್ದೇಶ್ ಬೇಡಿಕೆ ಇಟ್ಟಿದ್ದರು.
ಈ ಹಣವನ್ನು ಪಡೆಯುವಾಗಲೇ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ನೇತೃತ್ವದ ಇನ್ ಸ್ಪೆಕ್ಟರ್ ಎಚ್.ಎಸ್.ಸುರೇಶ್, ವೀರಬಸಪ್ಪ ಕುಸಲಾಪುರ ಮತ್ತು ಸಿಬ್ಬಂದಿ ರೇಡ್ ಮಾಡಿದ್ದಾರೆ.
SUMMARY | Shivamogga City Corporation, Shivamogga Lokayukta, Shivamogga Lokayukta raid, 40% commission, contractor’s problem,
KEY WORDS | Shivamogga City Corporation, Shivamogga Lokayukta, Shivamogga Lokayukta raid, 40% commission, contractor’s problem,