SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 13, 2024 | SHIVAMOGGA DASARA | ರಾಜ್ಯದೆಲ್ಲೆಡೆ ನಡೆದ ವಿಜಯದಶಮಿಯ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ನಡೆದ ನಾಡಹಬ್ಬ ದಸರಾ ನಿನ್ನೆ ಹಲವು ವಿಶೇಷಗಳಿಗೆ ಕಾರಣವಾಗಿತ್ತಷ್ಟೆ ಅಲ್ಲದೆ ಈ ಹಿಂದಿಗಿಂತಲೂ ಮಲೆನಾಡಿಗರ ಗಮನ ಸೆಳೆಯಿತು. ನಿನ್ನೆ ನಡೆದ ಶಿವಮೊಗ್ಗ ಜಂಬೂ ಸವಾರಿಯ ದೃಶ್ಯ ಹಾಗೂ ಅಕ್ಷರ ರೂಪದ ವಿವರಣೆಯ ವರದಿ ಹೀಗಿದೆ.
ನಿನ್ನೆ ಶಿವಮೊಗ್ಗ ಜಂಬೂಸವಾರಿಯಪ ಪ್ರಮುಖ ಆಕರ್ಷಣೆಯಾಗಿದ್ದು ಸಾಗರ್ ಆನೆ. ಬೆಳ್ಳಿಯ ಅಂಬಾರಿಯನ್ನ ಬೆನ್ನಿಗೆ ಕಟ್ಟಿಸಿಕೊಂಡು ಹೊರಟ ಸಾಗರ ರೀಲ್ಸ್ ಪ್ರಿಯರಿಗೆ ಹಬ್ಬವಾಗಿದ್ದ. ಆತನ ಗಾಂಭೀರ್ಯದ ನಡಿಗೆಯನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಳ್ಳಲೆಂದೆ ಕೋಟೆ ರಸ್ತೆಯಲ್ಲಿ ಮಂದಿ ನರೆದಿದ್ದರು. ಸಾಗರ ತೂಕದ ಬಿಗುಮಾನವನ್ನ ತೋರಿಕೊಂಡೆ ನಡೆದ ಸಾಗರ್ಗೆ ಮತ್ಯಾರು ಸರಿಸಾಟಿಯೇ ಇರಲಿಲ್ಲ.
ಇನ್ನೂ ಕೋಟೆ ಪ್ರದೇಶದ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯೊಂದಿಗೆ ಶಿವಮೊಗ್ಗದ ಜಂಬೂ ಸವಾರಿ ಆರಂಭಗೊಂಡಿತು. ಸ್ಥಳೀಯ ಶಾಸಕರು, ಮಹಾನಗರ ಪಾಲಿಕೆ ಆಯುಕ್ತರು ನಂದಿಕೋಲಿಗೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೊದಲ ಹೆಜ್ಜೆ ಹಾಕಿದರು.
ಆ ಬಳಿಕ ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಅಟ್ಟಣಿಗೆಯ ಮೇಲೆ ನಿಂತು ಸಚಿವ ಮಧು ಬಂಗಾರಪ್ಪ, ಶಾಸಕ ಎಸ್ಎನ್ ಚನ್ನಬಸಪ್ಪ ಸೇರಿದಂತೆ ಹಲವರು ಅಂಬಾರಿಯಲ್ಲಿದ್ದ ಚಾಮುಂಡೇಶ್ವರಿ ದೇವಿಗೆ ಹೂವು ಅರ್ಪಿಸಿದರು.
ಸುಮಾರು 650 ಕೆಜೆ ತೂಕದ ಬೆಳ್ಳಿಯ ಅಂಬಾರಿಯನ್ನ ಹೊತ್ತ ಸಾಗರ್ನ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆ ಮಧ್ಯಾಹ್ನ 3.30ಕ್ಕೆ ಆರಂಭವಾಯಿತು. ಬಹದ್ದೂರ್ ಹಾಗೂ ಬಾಲಣ್ಣ ಸಾಗರನ್ನ ಹಿಂಬಾಲಿಸಿದವು. ದಾರಿಯುದ್ದಕ್ಕೂ ಜಂಬೂಸವಾರಿಗೆ ಸಾವಿರಾರು ಜನರು ನೆರೆದಿದ್ದರು.
ಇನ್ನೂ ಮೊದಲಿನಿಂದಲೂ ಬಂದ ಪ್ರತೀತಿಯಂತೆ ಚಾಮುಂಡೇಶ್ವರಿ ದೇವರು ಹೊರಟ ಬೆನ್ನಲ್ಲೆ 200ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳಲ್ಲಿ ಶಿವಮೊಗ್ಗದ ವಿವಿಧ ದೇವಸ್ಥಾನದ ಉತ್ಸವ ಮೂರ್ತಿಗಳು ಸಾಗಿದವು.
ಜಂಬೂ ಸವಾರಿ ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ಸರ್ಕಲ್, ದುರ್ಗಿಗುಡಿ, ಜೈಲು ಸರ್ಕಲ್ ಮಾರ್ಗವಾಗಿ ಫ್ರೀಡಂ ಪಾರ್ಕ್ ತಲುಪಿತು.
ಅಲ್ಲಲ್ಲಿ ಮಳೆಯ ನಡುವೆ ಫ್ರೀಡಂಪಾರ್ಕ್ಗೆ ಸಾಗಿದ ಜಂಬೂಸವಾರಿ , ಬನ್ನಿ ಉತ್ಸವಕ್ಕೆ ಸಿದ್ದವಾಯಿತು. ಆ ಬಳಿಕ ತಹಶೀಲ್ದಾರ್ ಗಿರೀಶ್ ಸಂಪ್ರದಾಯದಂತೆ ಅಂಬು ಛೇದನ ಮಾಡಿದರು. ಬಳಿಕ ರಾವಣ ದಹನ ವಿಶೇಷವಾಗಿ ನಡೆದು ಸಿಡಿಮದ್ದು ಪ್ರದರ್ಶನ ನಡೆಯಿತು.
ಈ ವಿಡಿಯೋ ನೀವು ಹಂಚಿಕೊಳ್ಳಬಹುದು ಜಸ್ಟ್ 48 ಸೆಕೆಂಡ್ನಲ್ಲಿ ಶಿವಮೊಗ್ಗ ದಸರಾದ ಅದ್ಭುತ ಕ್ಷಣಗಳು ಕ್ಲಿಕ್ ಮಾಡಿ ಷೇರ್ ಮಾಡಿ ವಾಟ್ಸಾಪ್ ಸ್ಟೇಟಸ್ಗೆ ಬಳಸಿ
SUMMARY |The Dasara festival was held in Shivamogga with the same fervour as Mysore Dasara. Here’s the full details
KEYWORDS | Dasara festival in Shivamogga, Mysore Dasara