SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 10, 2024 | .ಶಿವಮೊಗ್ಗ ನಾಡಹಬ್ಬ ದಸರಾದಲ್ಲಿ ಇವತ್ತು ಪ್ರಖ್ಯಾತ ನಟಿ ಮಾಲಾಶ್ರೀ ಪಾಲ್ಗೊಳ್ಳಲಿದ್ದಾರೆ.
ದಸರಾ ಅಂಗವಾಗಿ ಇವತ್ತು ಅಡಿಗೆ ಮಾಡುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಅಮ್ಮಮಗ ಸೇರಿಕೊಂಡು ಅಡುಗೆ ಮಾಡುವ ಸ್ಪರ್ಧೆ ಇದಾಗಿದ್ದು, ಗೋದಿ ಉಪಯೋಗಿಸಿ ಅಡುಗೆ ಮಾಡಲು ಅವಕಾಶ ನೀಡಲಾಗಿದೆ. ಎಸ್ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಕಾರ್ಯಕ್ರಮ ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಸಂಜೆ 7.15 ಕ್ಕೆ ಸರಿಯಾಗಿ ಕುವೆಂಪು ರಂಗ ಮಂದಿರದಲ್ಲಿ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಇದಕ್ಕೂ ಮೊದಲು ಕುವೆಂಪು ರಂಗಮಂದಿರಲ್ಲಿ ಸಂಜೆ 5.30 ಕ್ಕೆ ದಸರಾ ಸಮಾರೋಪ ಸಮಾರಂಭ ನಡೆಯಲಿದೆ.
ಸಾಂಸ್ಕೃತಿಕ ದಸರಾ ಅಂಗವಾಗಿ 5.30 ರಿಂದ ನಾಟ್ಯ ವೈವಿಧ್ಯ. ಸಂಗೀತ ಸಂಭ್ರಮ, . ಸ್ಥಳೀಯ ನೃತ್ಯ ಶಾಲಾ ಮಕ್ಕಳಿಂದ ನಾಟ್ಯ ಪ್ರದರ್ಶನ ನಡೆಯಲಿದೆ. ಫ್ರೀಡಂ ಪಾರ್ಕ್‌ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶೇಷ ಅಂದರೆ ಈ ಕಾರ್ಯಕ್ರಮದಲ್ಲಿ ನಟಿ ಮಾಲಾಶ್ರೀ ಪಾಲ್ಗೊಳ್ಳಲಿದ್ದಾರೆ. ಇನ್ನೂ ಶಿವಮೊಗ್ಗದ ಹೆಮ್ಮೆಯ ಗಾಯಕ ಪ್ರಹ್ಲಾದ್ ದೀಕ್ಷಿತ್ ಮತ್ತು ತಂಡ ಪ್ರದರ್ಶನ ನೀಡಲಿದೆ.

SUMMARY | Popular actress Malashree will be participating in the Dasara celebrations in Shivamogga today.
KEYWORDS | Popular actress Malashree , Dasara celebrations in Shivamogga today.