SHIVAMOGGA | MALENADUTODAY NEWS
Sep 7, 2024 shimoga rain alert news
ಶಿವಮೊಗ್ಗ ಗಣೇಶನ ಉತ್ಸವಕ್ಕೆ ಸಿದ್ಧವಾಗಿದೆ. ನಿನ್ನೆಯ ಗೌರವ ಆಧರದಿಂದ ಮನೆಗೆ ಗೌರಮ್ಮನ್ನ ಬರಮಾಡಿಕೊಳ್ಳಲಾಗಿದ್ದು, ಇವತ್ತು ಗಣೇಶನ ಆಗಮನವಾಗಲಿದೆ. ಕಳೆದ ವರ್ಷ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಹಿಘಟನೆಯ ಹಿನ್ನೆಲೆಯಲ್ಲಿ ಈ ಸಲ ಇನ್ನಷ್ಟು ಬಿಗಿ ಕ್ರಮಗಳನ್ನ ಪೊಲೀಸ್ ಇಲಾಖೆ ಕೈಗೊಂಡಿದೆ.


ಶಾಂತಿಸಭೆ ನಡೆಸಿರುವ ಪೊಲೀಸ್ ಇಲಾಖೆ
ಈ ಸಲ ಶಿವಮೊಗ್ಗದಲ್ಲಿ ಎಸ್‌ಪಿ ಮಿಥುನ್ ಕುಮಾರ್ ನೇತೃತ್ವದ ಪ್ರತಿ ಎರಿಯಾ ಎರಿಯಾಗಳಲ್ಲಿ ಶಾಂತಿ ಸಭೆಯನ್ನ ನಡೆಸಲಾಗಿದೆ. ಕಳೆದ ಒಂದು ತಿಂಗಳಿನಿಂದ ಶಾಂತಿ ಸಭೆಗಳನ್ನ ನಿರಂತರವಾಗಿ ನಡೆಸಲಾಗುತ್ತಿದೆ. ಈ ನಡುವೆ ರೌಡಿಶೀಟರ್‌ಗಳನ್ನ, ಬ್ಯಾಡ್ ಕಾರೆಕ್ಟರ್ಸ್‌ಗಳ ಮೇಲೆ ಕಣ್ಣಿಟ್ಟು ಅವರಿಗೆ ವಾರ್ನಿಂಗ್ ನೀಡಲಾಗಿದೆ ಹಲವರನ್ನ ಗಡಿಪಾರು ಮಾಡಲಾಗಿದೆ. ಡ್ರೋನ್ ಕ್ಯಾಮರಾಗಳ ಮೂಲ ಸೂಕ್ಷ್ಮ ಪ್ರದೇಶಗಳ ಮೇಲೆ ಕಣ್ಣಿಡಲಾಗಿದೆ.
ಡಿಜೆ ಬ್ಯಾನ್, ಪ್ಲೆಕ್ಸ್ ಮೇಲೆ ಕಣ್ಣು
ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಡಿಜೆ ಬ್ಯಾನ್ ಮಾಡಲಾಗಿದೆ. ಅಲ್ಲದೆ ಪ್ಲೆಕ್ಸ್‌ಗಳ ಪ್ರಿಂಟ್ ಹಾಕುವ ಹಾಗೂ ಪ್ರಿಂಟ್ ಹಾಕಿಸುವವರ ಮಾಹಿತಿಯನ್ನ ಪೊಲೀಸ್ ಇಲಾಖೆ ಪಡೆದುಕೊಳ್ಳುತ್ತಿದ್ದು, ಪ್ರಿಂಟ್ ಪ್ಲೆಕ್ಸ್‌ಗಳ ಮೇಲಿನ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿಚಾರದಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಪೊಲೀಸ್ ಇಲಾಖೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಪ್ರಸಾದ ವಿನಿಯೋಗಕ್ಕೆ ಅನುಮತಿ
ವಿಶೇಷ ಅಂದರೆ ಈ ಸಲ ಗಣಪತಿ ಪೆಂಡಾಲ್‌ಗಳಲ್ಲಿ ಪ್ರಸಾದ ವಿನಿಯೋಗಕ್ಕೂ ನಿಯಮ ರೂಪಿಸಲಾಗಿದೆ. ಪ್ರಸಾದವನ್ನು ತಯಾರಿಸುವವರು FSSAI ಪರವಾನಗಿ ಪಡೆದಿರ ಬೇಕು ಎಂದು ಸೂಚಿಸಲಾಗಿದೆ. ಈ ಪರವಾನಿಗೆ ಪಡೆದಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಪ್ರಸಾದ ತಯಾರಿಸಿ ಭಕ್ತರಿಗೆ ನೀಡಬೇಕು ಎಂದು ಸೂಚಿಸಲಾಗಿದೆ. ಹೆಚ್ಚಿನ ವಿವರ ಇಲ್ಲಿದೆ ಓದಿ
2024 ganesh Chaturthi | ಗಣೇಶನ ಪ್ರಸಾದ ವಿತರಣೆಗೆ ಹೊಸ ರೂಲ್ಸ್ | ಈ ನಿಯಮ ಪಾಲಿಸಲೇಬೇಕು | ಸರ್ಕಾರದ ಆದೇಶ
ಚೀತಾ ಗಸ್ತು ಆರಂಭ
ಈ ನಡುವೆ ಶಿವಮೊಗ್ಗದಲ್ಲಿ ಚೀತಾ ಗಸ್ತನ್ನ ಆರಂಭಿಸಲಾಗಿದೆ. ಭರತ್ ಕುಮಾರ್ ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗರವರ ನೇತೃತ್ವದ ಸಿದ್ದಪ್ಪ, ಪೊಲೀಸ್ ಉಪ ನಿರೀಕ್ಷಕರು, ತುಂಗಾನಗರ ಪೊಲೀಸ್ ಠಾಣೆ ಹಾಗೂ ನವೀನ್, ಪೊಲೀಸ್ ನಿರೀಕ್ಷಕರು, ಜಯನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂಧಿಗಳನ್ನೊಳಗೊಂಡ ವಿಶೇಷ ಚೀತಾ ಗಸ್ತನ್ನು ನಿಯೋಜಿಸಲಾಗಿದೆ. ಈ ಚೀತಾ ಟೀಂ ಶಿವಮೊಗ್ಗದಲ್ಲಿ ಸಂಜೆ ಮತ್ತು ಬೆಳಗಿನ ಜಾವ ಗಸ್ತು ಕರ್ತವ್ಯ ನಿರ್ವಹಿಸಲಿದ್ದಾರೆ. ಸೂಕ್ಷ್ಮ ಸಮಯದಲ್ಲಿ ಯಾವುದೇ ಸನ್ನಿವೇಶಗಳನ್ನು ಈ ಗಸ್ತು ಟೀಂ ಎದುರಿಸಲಿದೆ.
ಪೊಲೀಸ್ ಪಥ ಸಂಚಲನ
ಇನ್ನೂ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸ್ ಇಲಾಖೆ ಶಿವಮೊಗ್ಗ ಹಾಗೂ ಭದ್ರಾವತಿ ನಗರದಲ್ಲಿ ಪೊಲೀಸ್ ಪಥ ಸಂಚಲನ (ರೂಟ್ ಮಾರ್ಚ್) ವನ್ನು ನಡೆಸಿದೆ. ಎರಡು ನಗರಗಳ ಸೂಕ್ಷ್ಮ ಪ್ರದೇಶಗಳಲ್ಲಿ ಆರ್‌ಎಎಫ್ ಹಾಗೂ ಪೊಲೀಸ್ ಸಿಬ್ಬಂದಿ ಪಥಸಂಚಲನೆ ನಡೆಸಿದ್ದು, ಆಯುಧಗಳನ್ನ ಪ್ರದರ್ಶಿಸಿದೆ. ಈ ಮೂಲಕ ಸಾರ್ವಜನಿಕರಲ್ಲಿ ನಾವಿದ್ದೇವೆ ಎಂಬ ದೈರ್ಯ ತುಂಬಿದೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ