SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 17, 2024
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ಸೆಪ್ಟೆಂಬರ್ 12 ರಂದು ಕಾವೇರಿ ಹಾಗೂ ಶರಾವತಿ ವಿಭಾಗದ ಕೈದಿಗಳ ಹೊಡೆದಾಟದ ಸಂಬಂಧ ಒಟ್ಟು 21 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
THE BHARATIYA NYAYA SANHITA (BNS), 2023 (U/s-189(2),189(4),191(2),191(3),221,132,121(1),352,351(2),54,190) ಅಡಿಯಲ್ಲಿ ಉದ್ದೇಶಪೂರ್ವಕವಾಗಿ ಅಕ್ರಮ ಕೂಟ ಕಟ್ಟಿಕೊಂಡು ಕೃತ್ಯವೆಸಗಿದ ಆರೋಪ, ಅಕ್ರಮ ಕೂಟ ನಿರ್ಮಿಸಿ ದೊಂಬಿ ಎಬ್ಬಿಸಿದ ಆರೋಪ , ಸಾರ್ವಜನಿಕ ಕರ್ತವ್ಯದಲ್ಲಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪ , ಉದ್ದೇಶಪೂರ್ವಕವಾಗಿ ಕರ್ತವ್ಯ ನಿರತ ಸಿಬ್ಬಂದಿಗೆ ಘಾಸಿಗೊಳಿಸಿದ ಮತ್ತು ಶಾಂತಿ ಭಂಗ ತಂದ ಆರೋಪ, ಕ್ರಿಮಿನಲ್ ಉದ್ದೇಶದೊಂದಿಗೆ ಆಸ್ತಿ ನಾಶ ಹಾಗೂ ವ್ಯಕ್ತಿಗಳಿಗೆ ಘಾಸಿಗೊಳಿಸಿದ ಆರೋಪ ಸಂಬಂಧ ಕೇಸ್ ದಾಖಲಾಗಿದೆ.
21 ಮಂದಿ ವಿರುದ್ಧ ಎಫ್ಐಆರ್
ತುಂಗಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ಪ್ರಕಾರ, ರಾಜಶೇಖರ ರೆಡ್ಡಿ, ನೂರುಲ್ಲಾ, ಟಿಪ್ಪು, ಅಭಿಷೇಕ್ ಪಾಲನ್, ಟ್ವಿಸ್ಟ್ ಇಮ್ರಾನ್, ಜಪ್ರುಲ್ಲಾ, ರಿಯಾಜ್, ಶರಣ್ ಪೂಜಾರಿ, ಪುರುಷೋತ್ತಮ್ , ಮುಬಾರಕ್, ಶಹಬ್ಬಾಜ್ ಶರೀಫ್, ತಿಮ್ಮೇಶ್ ನಾಯ್ಕ್, ಇದಾಯತ್ ಭಾಷಾ, ರವಿಕುಮಾರ್, ಮುನಿರಾಜ, ಅಲ್ಲಾಭಕ್ಷಿ, ಕಿರಣ್ ಪೂಜಾರಿ, ಸುಶಾಂತ್ , ವಿಜೀತ್ ಕುಮಾರ್, ಮಣಿ, ನಿಶಾಂತ್ ವಿರುದ್ಧ ಎಫ್ಐಅರ್ ದಾಖಲಾಗಿದೆ.
ಎಫ್ಐಆರ್ನಲ್ಲಿ ಆರೋಪವೇನು?
ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ಸೆಪ್ಟೆಂಬರ್ ಏಳರಿಂದ 12 ನೇ ತಾರೀಖಿನವರೆಗೂ ಬೀಡಿಗಾಗಿ ಕೈದಿಗಳು ಗಲಾಟೆ ಮಾಡುತ್ತಿದ್ದು , 12 ತಾರೀಖು ಈ ಗಲಾಟೆ ತಾರಕಕ್ಕೆ ಹೋಗಿದೆ. ಕಾವೇರಿ ವಿಭಾಗ ಹಾಗೂ ಶರಾವತಿ ವಿಭಾಗದ ಕೈದಿಗಳು ಹೊಡೆದಾಡಿಕೊಂಡಿದ್ದಾರೆ. ಅಲ್ಲದೆ ಕರ್ತವ್ಯ ನಿರತ ಸಿಬ್ಬಂದಿ ಮೇಲೆಲ ಹಲ್ಲೆ ಮಾಡಿ ಕಲ್ಲೂ ತೂರಾಟ ನಡೆಸಿದ್ದಾರೆ. ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅಧಿಕಾರಿಯೊಬ್ಬರಿಗೆ ವೈಯಕ್ತಿಕ ನಿಂದನೆ ಮಾಡಿದ್ದಾರೆ ಎಂದು ದೂರಲಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ