SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 22, 2024 shimoga eid milad
ಶಿವಮೊಗ್ಗ ನಗರ ಹಸಿರುಮಯವಾಗಿದೆ. ಈದ್ ಮಿಲಾದ್ ಮೆರವಣಿಗೆಗೆ ಸಕಲ ಸಿದ್ಧತೆಗಳು ನಡೆದಿದೆ. ಇಂದು ಮಧ್ಯಾಹ್ನ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸರ್ಕಲ್ಗಳಲ್ಲಿ ವಿಶೇಷ ಅಲಂಕಾರಗಳನ್ನ ಕೈಗೊಳ್ಳಲಾಗಿದೆ.
ಮೆರವಣಿಗೆ ಸಾಗುವ ಮಾರ್ಗ
ಮೆರವಣಿಗೆಯು ಮಧ್ಯಾಹ್ನ 3ಕ್ಕೆ ನಗರದ ಗಾಂಧಿಬಜಾರ್ನ ಜಾಮಿಯಾ ಮಸೀದಿಯಿಂದ ಈದ್ ಮಿಲಾದ್ ಮೆರವಣಿಗೆ ಪ್ರಾರಂಭಗೊಳ್ಳಲಿದೆ.

ಗಾಂಧಿ ಬಜಾರ್ 2ನೇ ಕ್ರಾಸ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಓಲ್ಡ್ ಬಾರ್ ಲೈನ್ ರಸ್ತೆ -ಪೆನ್ಷನ್ ಮೊಹಲ್ಲಾ-ಬಾಲರಾಜ್ ಅರಸ್ ರಸ್ತೆ-ಮಹಾವೀರ ಸರ್ಕಲ್-ಗೋಪಿ ಸರ್ಕಲ್- ನೆಹರೂ ರಸ್ತೆ- ಅಮೀರ್ ಅಹ್ಮದ್ ಸರ್ಕಲ್ ಮಾರ್ಗವಾಗಿ ಬಿ.ಎಚ್.ರಸ್ತೆ -ಅಶೋಕ ಸರ್ಕಲ್-ಎನ್.ಟಿ ರಸ್ತೆ-ಗುರುದೇವ ರಸ್ತೆ-ಕ್ಲಾರ್ಕ್ ಪೇಟೆ, ನೂರಾನಿ ಮಸೀದಿ, ಕೆ.ಆರ್.ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ಗೆ ಮೆರವಣಿಗೆ ಬಂದು ತಲುಪಲಿದೆ.
ಅಮೀರ್ ಅಹಮದ್ ಸರ್ಕಲ್
ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದ ಪ್ರಮುಖ ಸರ್ಕಲ್ ಅಮೀರ್ ಅಹಮದ್ ಸರ್ಕಲ್ ನಲ್ಲಿ ವಿಶೇಷ ಅಲಂಕಾರದ ಕಲಾಕೃತಿಯನ್ನ ನಿರ್ಮಿಸಲಾಗಿದೆ. ಸುತ್ತಲು ಜಗಮಗಿಸುವ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಎಂಕೆಕೆ ರೋಡ್ ಹಾಗೂ ಕೆಆರ್ಪುರಂ ರಸ್ತೆಯ ತುದಿಯಲ್ಲಿ ಬೃಹತ್ ಧ್ವಾರಗಳನ್ನ ನಿರ್ಮಿಸಲಾಗಿದೆ.
ವಾಹನಗಳ ಸಂಚಾರ, ನಿಲುಗಡೆ ನಿಷೇಧ
ಈದ್ ಮಿಲಾದ್ ಮೆರವಣಿಗೆ ಸಾಗುವ ಗಾಂಧಿ ಬಜಾರ್, ಜಾಮಿಯಾ ಮಸೀದಿಯಿಂದ ಅಮೀರ್ ಅಹ್ಮದ್ ಸರ್ಕಲ್ ವರೆಗಿನ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಲಿನ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ.
ಐದು ಡ್ರೋಣ್, 100 ವಿಡಿಯೊಗ್ರಾಫರ್ ಕಣ್ಗಾವಲು
ಈದ್ ಮಿಲಾದ್ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕೆ ಮೂವರು ಹೆಚ್ಚುವರಿ ಎಸ್ಪಿ, 25 ಮಂದಿ ಡಿವೈಎಸ್ಪಿ, 60 ಇನ್ಸ್ಪೆಕ್ಟರ್, 110 ಸಬ್ ಇನ್ಸ್ಪೆಕ್ಟರ್, 200 ಎಎಸ್ಐ, 3,500 ಪೊಲೀಸ್ ಹೆಡ್ ಕಾನ್ಸ್ಟೆಬಲ್, ಪೊಲೀಸ್ ಕಾನ್ಸ್ಟೆಬಲ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಂದು ಆರ್ಎಫ್ ತುಕಡಿ, ಎಂಟು ಡಿಎಆರ್ ತುಕಡಿ, ಒಂದು ಕ್ಯುಆರ್ಟಿ ತುಕಡಿ, ಒಂದು ಡಿಸ್ವಾತ್ ತುಕಡಿ, 10 ಕೆಎಸ್ಆರ್ಪಿ ತುಕಡಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯದಂತೆ ಕಣ್ಣಿಡಲು ಐದು ಡ್ರೋಣ್ ಕ್ಯಾಮೆರಾ, 100 ವಿಡಿಯೊಗ್ರಾಫರ್ಗಳನ್ನು ನಿಯೋಜಿಸಲಾಗಿದೆ.
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ