SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 9, 2024 | ಶಿವಮೊಗ್ಗದ ವ್ಯಕ್ತಿಯೊಬ್ಬನ ಜೊತೆಗೆ ಸೇರಿಕೊಂಡು ತನ್ನ ಮನೆಯಲ್ಲಿ ತಾನೆ ಕಳ್ಳತನ ಮಾಡಿದ ಮಹಿಳೆಯೊಬ್ಬಳು ಚನ್ನಗಿರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಚನ್ನಗಿರಿ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ಯುವತಿಯೊಬ್ಬಳು ಶಿವಮೊಗ್ಗದ ವ್ಯಕ್ತಿಯೊಬ್ಬನ ಜೊತೆ ಸಂಬಂಧ ಹೊಂದಿದ್ದಳು. ತಮ್ಮದೆ ಕಾರಣಕ್ಕೆ ಇವರಿಬ್ಬರು ಈ ಕೃತ್ಯವೆಸಗಿದ್ದಾರೆ.
ಇದಕ್ಕೂ ಮೊದಲು ಮನೆಯಲ್ಲಿ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಬಗ್ಗೆ ಯುವತಿ ಕಂಪ್ಲೆಂಟ್ ಕೊಟ್ಟಿದ್ದಳು. ಪೊಲೀಸರಿಗೆ ಪ್ರಕರಣದ ಬಗ್ಗೆ ಅನುಮಾನ ಬಂದು ಯುವತಿಯನ್ನೇ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿ ತನ್ನ ಸ್ನೇಹಿತನ ಜೊತೆಗೆ ಮನೆಯಲ್ಲಿ ಕಳ್ಳತನ ಮಾಡಿ ಆ ಬಳಿಕ ಕಳುವಾಗಿರುವ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಳು.
SUMMARY | Channagiri police have arrested a woman for stealing from her house along with a man from Shivamogga
KEYWORDS | Channagiri police , woman for stealing from her house ,Shivamogga