SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 23, 2024
ಶಿವಮೊಗ್ಗದಿಂದ ಚನ್ನೈಗೆ ಹಾಗೂ ಹೈದರಾಬಾದ್‌ಗೆ ಸ್ಪೈಸ್ ಜೆಟ್ ವಿಮಾನ ಸಂಸ್ಥೆ ಹಾರಾಟ ನಡೆಸಲಿದೆ ಎಂಬ ವರದಿಯನ್ನು ಮಲೆನಾಡು ಟುಡೆ ಮೊದಲು ನೀಡಿತ್ತು. ಅದರ ಪೂರ್ತಿ ಮಾಹಿತಿ ಈ ಲಿಂಕ್‌ನಲ್ಲಿದೆ :
Shimoga Airport | ಶಿವಮೊಗ್ಗದಿಂದ ಸ್ಪೈಸ್ ಜೆಟ್ ಹಾರಾಟ | ಎರಡು ಮಹಾನಗರಕ್ಕೆ ಸಂಪರ್ಕ | ಪೂರ್ತಿ ವಿವರ ಇಲ್ಲಿದೆ
ಇನ್ನೂ ಈ ಬಗ್ಗೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿವರಣೆ ನೀಡಿದ್ದಾರೆ. ಶಿವಮೊಗ್ಗದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎಂದಿರುವ ಬಿವೈಆರ್ ಸ್ಪೈಸ್ ಜೆಟ್ ವಿಮಾನ ಸಂಚಾರದ ವೇಳಾಪಟ್ಟಿಯನ್ನ ಸಹ ಹಂಚಿಕೊಂಡಿದ್ದಾರೆ. ಸಂಸದರ ಪೋಸ್ಟ್‌ನ ವಿವರ ಹೀಗಿದೆ
ಬಿ ವೈ ರಾಘವೇಂದ್ರ
ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಶಿವಮೊಗ್ಗ – ಹೈದರಾಬಾದ್ ಮತ್ತು ಶಿವಮೊಗ್ಗ – ಚೆನ್ನೈ ಮಧ್ಯೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಅ.10ರಿಂದ ಶಿವಮೊಗ್ಗದಿಂದ ಮೂರನೆ ವಿಮಾನಯಾನ ಸಂಸ್ಥೆ ಹಾರಾಟ ನಡೆಸಲಿದೆ.
ಚೆನ್ನೈಯಿಂದ ಶಿವಮೊಗ್ಗ: ಬೆಳಗ್ಗೆ 10:40ಕ್ಕೆ ಹೊರಟು, ಮಧ್ಯಾಹ್ನ 12:10ಕ್ಕೆ ತಲುಪಲಿದೆ.
ಶಿವಮೊಗ್ಗದಿಂದ ಹೈದರಾಬಾದ್: ಮಧ್ಯಾಹ್ನ 12:35ಕ್ಕೆ ಹೊರಟು, ಮಧ್ಯಾಹ್ನ 2:05ಕ್ಕೆ ತಲುಪಲಿದೆ.
ಹೈದರಾಬಾದ್‌ನಿಂದ ಶಿವಮೊಗ್ಗ: ಮಧ್ಯಾಹ್ನ 2:40ಕ್ಕೆ ಹೊರಟು, ಸಂಜೆ 4:10ಕ್ಕೆ ತಲುಪಲಿದೆ.
ಶಿವಮೊಗ್ಗದಿಂದ ಚೆನ್ನೈ: ಸಂಜೆ 4:25ಕ್ಕೆ ಹೊರಟು, ಸಂಜೆ 5:55ಕ್ಕೆ ತಲುಪಲಿದೆ.
ಈ ಹೊಸ ವಿಮಾನ ಮಾರ್ಗಗಳು ಶಿವಮೊಗ್ಗದ ಸಂಪರ್ಕವನ್ನು ಉತ್ತಮಗೊಳಿಸಿ, ಪ್ರವಾಸೋದ್ಯಮ ಮತ್ತು ವ್ಯಾಪಾರಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಇದಕ್ಕೆ ಸಹಕರಿಸಿದ ಸ್ಪೈಸ್‌ಜೆಟ್‌ಗೆ ಶಿವಮೊಗ್ಗ ಜನತೆಯ ಪರವಾಗಿ ಧನ್ಯವಾದಗಳು