SHIVAMOGGA | MALENADUTODAY NEWS | ಮಲೆನಾಡು ಟುಡೆ Nov 7, 2024
ಶಿವಮೊಗ್ಗದ ಎರಡು ಗ್ರಾಮಪಂಚಾಯಿತಿಗಳಲ್ಲಿನ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ ಆ ವಿಚಾರವಾಗಿ ವೇಳಾಪಟ್ಟಿಯನ್ನ ಪ್ರಕಟಣೆಯನ್ನು ನೀಡಲಾಗಿದೆ.
ಶಿವಮೊಗ್ಗ ತಾಲೂಕು ಕೋಟೆಗಂಗೂರು ಹಾಗೂ ಹೊಳಲೂರು ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ ಒಂದು ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲಾಗುತ್ತಿದೆ.
ಈ ಸಂಬಂಧ ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಹೊರಡಿಸಿದೆ. ಅದರ ವಿವರ ಹೀಗಿದೆ
ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕ: 06/11/2024,
ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 12/11/2024,
ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ: 13/11/2024,
ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: 15/11/2024,
ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸುವ ದಿನಾಂಕ: 23/11/2024 ರಂದು (ಬೆಳಗ್ಗೆ 7.00 ರಿಂದ ಸಂಜೆ 5.00ರವರೆಗೆ),
ಮರು ಮತದಾನದ ಅವಶ್ಯವಿದ್ದಲ್ಲಿ ಮತದಾನ ನಡೆಸುವ ದಿನಾಂಕ: 25/11/2024, ಮತಗಳ ಎಣಿಕೆ ದಿನಾಂಕ: 26/11/2024 ರಂದು (ಬೆ. 8.00ರಿಂದ ) ನಡೆಸಲಾಗುವುದು ಎಂದು ತಿಳಿಸಲಾಗಿದೆ.
ಸಾರ್ವಜನಿಕರು ಮುಕ್ತ ಹಾಗೂ ನ್ಯಾಯ ಸಮ್ಮತ, ಶಾಂತಿಯುತ ಚುನಾವಣೆ ನಡೆಸಲು ಸಹಕರಿಸುವಂತೆ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಬಿ.ಎನ್. ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
—————–
SUMMARY | Elections are being held for one member seat in Kotegangur and Holalur gram panchayats in Shivamogga taluk, which is lying vacant due to various reasons.
KEYWORDS | Elections held in Kotegangur gram panchayat , Holalur gram panchayat in Shivamogga taluk,
