SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 10, 2024 | SHIVAMOGGA AIRPORT| | ಶಿವಮೊಗ್ಗ | ಶಿವಮೊಗ್ಗದಿಂದ ಚೆನ್ನೈ ಹಾಗೂ ಹೈದ್ರಾಬಾದ್ಗೆ ಸ್ಪೈಸ್ ಏರ್ ಜೆಟ್ ವಿಮಾನಯಾನ ಸೇವೆಯನ್ನ ಇವತ್ತಿನಿಂದ ಅಧಿಕೃತವಾಗಿ ಆರಂಭಿಸಿದೆ. ಈ ಸಂಬಂಧ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಸಂಸದ ಬಿ ವೈ ರಾಘವೇಂದ್ರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ನಿಲ್ದಾಣ ಆರಂಭವಾಗಿ ಎರಡು ವರ್ಷವಾಗುತ್ತಿದೆ. ಪ್ರತಿನಿತ್ಯ 12 ಸಲ ವಿಮಾನಗಳ ಆಗಮನ/ನಿರ್ಗಮನ ಆಗುತ್ತಿದೆ. ಇಷ್ಟೊಂದು ಏರ್ ಟ್ರಾಫಿಕ್ ಮೂಮೆಂಟ್ ಆರಂಭದ ಹಂತದಲ್ಲಿ ಯಾವ ವಿಮಾನ ನಿಲ್ದಾಣಕ್ಕೂ ಸಿಕ್ಕಿಲ್ಲ ಎಂದರು.
ಇದೇ ವೇಳೆ ಶಿವಮೊಗ್ಗದಿಂದ ದೆಹಲಿಗೆ ಶೀಘ್ರದಲ್ಲಿ ವಿಮಾನಯಾನ ಸೇವೆ ಆರಂಭವಾಗಲಿದೆ ಎಂದು ತಿಳಿಸಿದ ಸಂಸದರು ಉಡಾನ್ ಯೋಜನೆಯ ಗುಣಗಾನ ಮಾಡಿದರು.
ಇನ್ನೂ ಸ್ಪೈಸ್ ಜೆಟ್ ವಿಮಾನಯಾನದ ಪೂರ್ಣ ವಿವರನ್ನ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಓದಿರಿ | Shimoga Airport | ಶಿವಮೊಗ್ಗದಿಂದ ಸ್ಪೈಸ್ ಜೆಟ್ ಹಾರಾಟ | ಎರಡು ಮಹಾನಗರಕ್ಕೆ ಸಂಪರ್ಕ | ಪೂರ್ತಿ ವಿವರ ಇಲ್ಲಿದೆ

SUMMARY | SpiceJet has officially launched flights from Shivamogga to Chennai and Hyderabad from today. Mp B Y Raghavendra inaugurated the programme at Shivamogga airport.
KEYWORDS | SpiceJet launched flights from Shivamogga to Chennai, shivamogga Hyderabad Flight, Mp B Y Raghavendra, Shivamogga airport.