SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 hindu mahasaba ganapati
ಶಿವಮೊಗ್ಗದಲ್ಲಿ ಗಣೇಶೋತ್ಸವ ವಿದ್ಯುಕ್ತವಾಗಿ ನಡೆದ ಇವತ್ತು ಐದನೇ ದಿನದ ವಿಸರ್ಜನೆಯು ನಡೆಯಲಿದೆ. ಈಗಾಗಲೇ ಸಾವಿರಕ್ಕೂ ಅಧಿಕ ಗಣಪತಿಗಳು ವಿಸರ್ಜನೆಯನ್ನ ಕಂಡಿವೆ. ಜಿಲ್ಲೆಯಲ್ಲಿ ಒಟ್ಟಾರೆ 3500 ಕ್ಕೂ ಹೆಚ್ಚು ಗಣಪತಿಗಳನ್ನ ಪ್ರತಿಷ್ಟಾಪಿಸಲಾಗಿದೆ. ಈ ಪೈಕಿ ಎಲ್ಲರ ಕುತೂಹಲಕ್ಕೆ ಕಾರಣವಾಗುವ ಗಣಪತಿ ಎಂದರೆ ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati in Shivamogga) ವಿಸರ್ಜನೆಯು ಯಾವಾಗ ಎಂಬುದು. ಇಡೀ ಶಿವಮೊಗ್ಗ ಹಬ್ಬದ ರೀತಿಯಲ್ಲಿ ಕುಣಿದು ಸಾಗುವ ಗಣಪತಿಯ ವಿಸರ್ಜನೆಯು ಇದೇ ತಿಂಗಳ 17 ರಂದು ನಡೆಯಲಿದೆ.
ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati in Shivamogga)
ಶಿವಮೊಗ್ಗ ನಗರದ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಟಾಪನೆ ಮಾಡಲಾಗಿರುವ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆಯು ಇದೇ ಸೆಪ್ಟೆಂಬರ್ 17 ರಂದು ನಡೆಯಲಿದೆ. ಅಲ್ಲಿಯವರೆಗೂ ಗಣಪತಿ ಮಂಡಳದ ಆವರಣದಲ್ಲಿ ಪ್ರತಿದಿನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಇನ್ನೂ ಪ್ರತೀತಿಯ ಪ್ರಕಾರವಾಗಿ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ನಡೆಯಲಿದೆ. ಈಗಾಗಲೇ ಈ ಸಂಬಂಧ ಪೊಲೀಸ್ ಇಲಾಖೆ ಸಕಲ ತಯಾರಿಗಳನ್ನ ಮಾಡಿಕೊಳ್ಳುತ್ತಿದೆ.
ಕುತೂಹಲ ಮೂಡಿಸಿದ ಕಲಾಕೃತಿ
ಈ ನಡುವೆ ಪ್ರತಿಸಲದಂತೆ ಈ ಸಲವೂ ಶಿವಮೊಗ್ಗ ನಗರದ ಶಿವಪ್ಪನಾಯಕ ಸರ್ಕಲ್ ಬಳಿಯಲ್ಲಿ ಪ್ರತಿಕೃತಿಯೊಂದು ತಲೆಯೆತ್ತಲಿದೆ. ಈ ವರ್ಷದ ಪ್ರತಿಕೃತಿ ಯಾವುದು ಎಂಬುದು ಇನ್ನೂ ಸಹ ಸ್ಪಷ್ಟವಾಗಿಲ್ಲ. ಆದರೆ ಕಲಾಕೃತಿಯು ಸಿದ್ದವಾಗುತ್ತಿದ್ದು, ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೂ ಎರಡು ಮೂರು ದಿನ ಮೊದಲು ಈ ವಿಚಾರದಲ್ಲಿ ಸ್ಪಷ್ಟತೆ ಸಿಗಲಿದೆ.
ಈದ್ ಮಿಲಾದ್ ಮೆರವಣಿಗೆ -eid milad 2024
ಇನ್ನೂ ಶಿವಮೊಗ್ಗದಲ್ಲಿ ವಿಶೇಷವಾಗಿ ನಡೆಯುವ ಈದ್ ಮಿಲಾದ್ ಈ ಸಲ ಇದೇ ಸೆಪ್ಟೆಂಬರ್ 22 ರಂದು ನಡೆಯಲಿದೆ ಎಂದು ಮೂಲಗಳು ಹೇಳಿವೆ ಸೆಪ್ಟೆಂಬರ್ 16 ರಂದು ಈದ್ ಮಿಲಾದ್ ಹಬ್ಬವಿದ್ದು, ಹಬ್ಬದ ಮೆರವಣಿಗೆಯು ಸೆಪ್ಟೆಂಬರ್ 22 ರಂದು ನಡೆಯಲಿದೆ ಎಂದು ತಿಳಿದುಬಂದಿದೆ.

ಓಂ ಗಣಪತಿ ಮೆರವಣಿಗೆ
ಓಂ ಗಣಪತಿಯ ರಾಜಬೀದಿ ಉತ್ಸವ ಇದೇ ಸೆಪ್ಟೆಂಬರ್ 19 ರಂದು ನಡೆಯಲಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತಾದರೂ ಅಂತಿಮವಾಗಿ ಸೆಪ್ಟೆಂಬರ್ 19 ರಂದು ಓಂ ಗಣಪತಿಯ ವಿಸರ್ಜನೆಗೆ ನಿರ್ಧರಿಸಲಾಗಿದೆ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ