ಶಿವಮೊಗ್ಗದಲ್ಲಿ ಸಿರಿಧಾನ್ಯ ಅಡುಗೆ ಸ್ಪರ್ಧೆ | ಏನಿದು ವಿಶೇಷ ಗೊತ್ತಾ

131

SHIVAMOGGA | MALENADUTODAY NEWS | ಮಲೆನಾಡು ಟುಡೆ |Nov 21, 2024

ಶಿವಮೊಗ್ಗ| ಇಂಟ‌ರ್ ನ್ಯಾಷನಲ್ ಲಿಂಗಾಯತ ಯೂತ್ ಫೋರಂ, ವೀರಶೈವ ಯುವ ಸಂಗಮ ಹಾಗೂ  ಬಸವಕೇಂದ್ರ ಶಿವಮೊಗ್ಗ ಇವರ ವತಿಯಿಂದ ILYF ಪರಿಚಯ ಕಾರ್ಯಕ್ರಮ ಹಾಗೂ ಸಿರಿಧಾನ್ಯ ಆಹಾರ ಸ್ಪರ್ಧೆ ಯನ್ನು ನವಂಬರ್ 24 ರಂದು ಆಯೋಜಿಸಲಾಗಿದೆ. ಎಂದು iLYF ನ ಅಧ್ಯಕ್ಷ ಮಹದೇವ್ ಪ್ರಸಾದ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು  ಇದೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ILYF  ಹಾಗೂ ವೀರಶೈವ ಯುವ ಸಂಗಮದ ವತಿಯಿಂದ ಸಿರಿಧಾನ್ಯ ಅಡುಗೆ ಸ್ಪರ್ಧೆಯನ್ನು ಶಿವಮೊಗ್ಗದ ಬಸವ ಕೇಂದ್ರದಲ್ಲಿ ಆಯೋಜಿಸಿದ್ದೇವೆ. 

ಹಾಗೆಯೇ ಈ ಸಿರಿಧಾನ್ಯ ಸ್ಪರ್ಧೆಯಲ್ಲಿ ಭಾಗವಹಿಸುವವರು ನವಂಬರ್ 23 ರ ಒಳಗೆ ಹೆಸರು ನೊಂದದಾಯಿಸಬೇಕು. ಇದರಲ್ಲಿ ಪುರುಷರು ಮಹಿಳೆಯರು ಹಾಗೂ ಯಾವುದೇ ಸಂಘ-ಸಂಸ್ಥೆಗಳು ಭಾಗವಹಿಸಬಹುದು. ಮಹಿಳಾ ಹಾಗೂ ಪುರುಷರಿಗೆ ಪ್ರತ್ಯೇಕ ಬಹುಮಾನ ಇರುತ್ತದೆ ಎಂದು ಹೇಳಿದರು

ಈ ಕಾರ್ಯಕ್ರಮದ ಮುಖ್ಯ ಉದ್ದೇಶ ನಮ್ಮ ಇಂಟರ್ನ್ಯಾಷನಲ್ ಲಿಂಗಾಯತ ಯೂಥ್ ಫಾರಂ (ilyf)ಅನ್ನು ಶಿವಮೊಗ್ಗದ  ಜನತೆಗೆ ಪರಿಚಯಿಸುವುದಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಸರಿಸುಮಾರು 2 ರಿಂದ ಮೂರು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಕಾರ್ಯಕ್ರಮಕ್ಕೆ ಅಂತರಾಷ್ಟ್ರೀಯ ವಾಣಿಜ್ಯ ಉದ್ಯಮಿಗಳು. ನ್ಯಾಯಾಧೀಶರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು  ಭಾಗವಹಿಸಿದ್ದಾರೆ ಎಂದರು.

ಇಂಟರ್ನ್ಯಾಷನಲ್ ಲಿಂಗಾಯತ ಯೂಥ್ ಫಾರಂ 2013 ರಂದು ಪ್ರಾರಂಭವಾಗಿ ಇಂದು 2000 ಕ್ಕೂ ಅಧಿಕ ಸದಸ್ಯರುಗಳನ್ನು ಹೊಂದಿದೆ.

SUMMARY |. Basavakendra Shivamogga has organised an ILYF introduction programme and a millet food competition on November 24. iLYF president Mahadev Prasad said

 

KEY WORDS |  Basavakendra Shivamogga,  Internatinol lingayuth youth form, kannadanews,

 

Share This Article