SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 28, 2024 | SHIVAMOGGA DASARA | ದಸರಾ ಹಬ್ಬಕ್ಕೆ ಬೊಂಬೆ ಇಡುತ್ತಿದ್ದಾರೆ, ನವರಾತ್ರಿಯ ಗೊಂಬೆ ಅಲಂಕಾರ ನಿಮ್ಮನೆಯಲ್ಲಿ ಹೇಗಿರುತ್ತದೆ. ಗೊಂಬೆ ಅಲಂಕಾರದಲ್ಲಿ ಬಹುಮಾನ ಗೆಲ್ಲಬೇಕಾ? ಅಂತಹದ್ದೊಂದು ಅವಕಾಶ ಶಿವಮೊಗ್ಗದ ಜನರಿಗೆ ಸಿಗಲಿದೆ. ಈ ಸಂಬಂಧ ನಾಡಹಬ್ಬ ದಸರಾ ಪ್ರಯುಕ್ತ ಫ್ರೆಂಡ್ಸ್ ಸೆಂಟರ್(ರಿ.,) ಮತ್ತು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ ನೋಡೋಣ ಬನ್ನಿ ದಸರಾ ಗೊಂಬೆ ಸ್ಪರ್ಧೆಯನ್ನ ಆಯೋಜಿಸಿದೆ. ಅದರ ವಿವರ ಹೀಗಿದೆ.
ನಾಡಹಬ್ಬ ದಸರಾ ಪ್ರಯುಕ್ತ ಫ್ರೆಂಡ್ಸ್ ಸೆಂಟರ್(ರಿ.,) ಮತ್ತು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಆಶ್ರಯದಲ್ಲಿ ಸಾರ್ವಜನಿಕ ಬಂಧುಗಳಿಗಾಗಿ ವೈವಿಧ್ಯಮಯ ಗೊಂಬೆಗಳನ್ನು ತಮ್ಮ ಮನೆಯಲ್ಲಿ ಕೂರಿಸಿ, ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಆಶಯದಿಂದ ?ನೋಡೋಣ ಬನ್ನಿ ದಸರಾ ಗೊಂಬೆ? ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
:ನಿಬಂಧನೆಗಳು:
1) ನಿಮ್ಮ ಮನೆಯಲ್ಲಿ ಪಟ್ಟದ ಗೊಂಬೆ ಸೇರಿದಂತೆ ಪಾರಂಪರಿಕ/ವೈವಿಧ್ಯಮಯ ಗೊಂಬೆ ಕೂರಿಸಿರಬೇಕು.
2) ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ದಿನಾಂಕ: 4.10.2024ರೊಳಗೆ ತಮ್ಮ ಹೆಸರನ್ನು ಕೆಳಕಂಡ ನಂಬರಿಗೆ ಫೋನ್ ಮಾಡಿ ನೊಂದಾಯಿಸಬೇಕು.
3) ತೀರ್ಪುಗಾರರು ನಿಮ್ಮ ಮನೆಗೆ ಬಂದು ಗೊಂಬೆ ವೀಕ್ಷಿಸಿ, ಸೂಕ್ತವಾದ ದಿನ ವಿಜೇತರಿಗೆ ಬಹುಮಾನ ನೀಡುವರು.
4) ಆಕರ್ಷಕ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು.
5) ತೀರ್ಪುಗಾರರ ತೀರ್ಮಾನವೇ ಅಂತಿಮ.
6) ಸಂಪರ್ಕಿಸಬೇಕಾದವರ ವಿವರ: ಬಿ.ಜಿ. ಧನರಾಜ್, ಅಧ್ಯಕ್ಷರು, ಫ್ರೆಂಡ್ಸ್ ಸೆಂಟರ್: 9845262166,
ಸ್ಪಪ್ನ ಬದರಿ: ಅಧ್ಯಕ್ಷರು, ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗ: 9844037343 , ಕಾರ್ಯಕ್ರಮ ಸಂಯೋಜಕರು: ಶ್ರೀರಂಜಿನಿ ದತ್ತಾತ್ರಿ: 9449998531, ಹಾಗೂ ಉಮಾವೆಂಕಟೇಶ್: 9845817380