SHIVAMOGGA | MALENADUTODAY NEWS | ಮಲೆನಾಡು ಟುಡೆ Oct 26, 2024
ನಮ್ ಟೀಮ್ ರಂಗತಂಡವು ಶಿವಮೊಗ್ಗದಲ್ಲಿ ಅಕ್ಟೋಬರ್. 26, 27ರಂದು ನೀನಾಸಂ ನಾಟಕೋತ್ಸವವನ್ನು ಆಯೋಜಿಸಿದೆ. ಈ ಬಗ್ಗೆ ಮಾತನಾಡಿರುವ ತಂಡದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್, ಪ್ರತಿ ವರ್ಷದಂತೆ ಈ ಬಾರಿಯೂ ಸಹ ನೀನಾಸಂ ತಿರುಗಾಟದ ನಾಟಕಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಿದೆ.
ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವವು ನಡೆಯಲಿದ್ದು ಈಗಾಗಲೇ ರಾಜ್ಯಾದ್ಯಂತ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಪಡೆದಿರುವ ಎರಡು ನಾಟಕಗಳು ಪ್ರದರ್ಶನ ಆಗಲಿವೆ ಎಂದರು.
ಇನ್ನೂ ಇವತ್ತು ನೀನಾಸಮ್ ತಿರುಗಾಟ ತಂಡದ ನಾಟಕ – ಮಾಲತೀಮಾಧವ ಪ್ರದರ್ಶನಗೊಳ್ಳಲಿದೆ. ಇದರ ರಚನೆ: ಭವಭೂತಿ ಹಾಗೂ ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ.ವಿ.ಯವರದ್ದಾಗಿದೆ.
ಕ್ರಿ.ಶ. 8 ನೆಯ ಶತಮಾನದ ಪ್ರಸಿದ್ಧ ಸಂಸ್ಕೃತ ನಾಟಕಕಾರ ಭವಭೂತಿಯ ಈ ಕೃತಿ ಮೇಲ್ನೋಟಕ್ಕೆ ಸರಳ –ಮಾಲತಿ ಮತ್ತು ಮಾಧವ ಎಂಬ ಪ್ರೇಮಿಗಳು ತಮ್ಮ ಮದುವೆಗಿರುವ ತೊಡಕುಗಳನ್ನೆಲ್ಲ ದಾಟಿ ಸಂಲಗ್ನಗೊಳ್ಳುವುದೂ ಜತೆಗೆ ಇನ್ನೆರಡು ಜೋಡಿ ಮದುವೆಗಳೂ ಸಂಭವಿಸುವುದೂ ಈ ಕತೆಯ ತಿರುಳು.
ಈ ಮದುವೆಗಳಿಗೆ ವಿಘ್ನ ಉಂಟಾಗುವುದು ರಾಜಕೀಯ ಕಾರಣದಿಂದ – ಪದ್ಮಾವತಿಯ ರಾಜನು ತನ್ನ ಗೆಳೆಯನಿಗೆ ಮಾಲತಿಯನ್ನು ಮದುವೆ ಮಾಡಿಸಲು ಬಯಸಿದ್ದಾನೆ. ಇದರಿಂದ ಮಾಧವ ಹತಾಶನಾಗಿ ನಾಗರಿಕಲೋಕ ತೊರೆದು ಸ್ಮಶಾನವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣವಾಗಿರುವುದನ್ನು ತಡೆದು ಅವಳನ್ನು ಉಳಿಸುವುದು, ಆಮೇಲೆ ಮತ್ತೊಮ್ಮೆ ಅವಳ ಅಪಹರಣವಾದಾಗ ಮಾಧವ ಕಾಡುಮೇಡು ಅಲೆಯುವುದು, ಮತ್ತು ಅಂತಿಮವಾಗಿ ಸೌದಾಮಿನಿಯೆಂಬ ಬೌದ್ಧ ಸಾಧಕಿ ಆಕೆಯನ್ನು ಉಳಿಸುವುದು ಮತ್ತು ಅಂತಿಮವಾಗಿ ಅವರಿಬ್ಬರ ಸಮಾಗಮ – ಹೀಗೆ ಕಥನ ಸಾಗುತ್ತದೆ.
ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಇಲ್ಲಿ ಕಾಮಂದಕಿ ಎಂಬ ಬೌದ್ಧ ಸನ್ಯಾಸಿನಿ ಮತ್ತವಳ ಶಿಷ್ಯರು ಕಾರಣರಾಗುತ್ತಾರೆ. ವೈರಾಗ್ಯಕ್ಕೆ ಮುಖ ಮಾಡಿರುವ ಸನ್ಯಾಸಿಗಳೇ ಸಂಸಾರಗಳನ್ನು ಕಟ್ಟುವ ಸೂತ್ರಧಾರರಾಗುವುದು ಈ ನಾಟಕದ ಮರ್ಮ. ಆಮೂಲಕ ಆಗಬಾರದ ಮದುವೆಗಳು ನಿಂತು ಆಗಬೇಕಾದ ಮದುವೆಗಳು ತಂತಾನೇ ನಡೆಯುವುದು ಈ ಕೃತಿಯ ವಿಶಿಷ್ಟ ನಾಟಕೀಯತೆ.
ಮುಂಗಡ ಟಿಕೆಟಿಗೆ 9845518866 ಈ ನಂಬರನ್ನು ಸಂಪರ್ಕಿಸಬಹುದು.
SUMMARY | Nam Team theatre group in Shimoga helld Ninasam Theatre Festival 26th and 27th. Honnali Chandrasekhar, general secretary of the troupe, said, “Like every year, this time too, Neenasam has organised touring plays in Shivamogga.
KEYWORDS | Nam Team theatre group in Shimoga, Ninasam Theatre Festival, Honnali Chandrasekhar, general secretary of the troupe, Neenasam touring