SHIVAMOGGA | MALENADUTODAY NEWS | ಮಲೆನಾಡು ಟುಡೆ Oct 15, 2024
ಶಿವಮೊಗ್ಗ: ಜಿಲ್ಲಾ ಅಡಿಕೆ ವರ್ತಕರ ಸಂಘ, ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ಮತ್ತು ಜಾಗೃತಿ ಮತ್ತು ಆಡಳಿತ ವಿಭಾಗ ವತಿಯಿಂದ ಜಿಲ್ಲಾ ಅಡಿಕೆ ವರ್ತಕರ ಸಂಘದ ಎಪಿಎಂಸಿ ಪ್ರಾಂಗಣದಲ್ಲಿ ಅಕ್ಟೋಬರ್ 16 ರಂದು ಮಧ್ಯಾಹ್ನ 3.30ಕ್ಕೆ “E-WAY BILL FOR CITIZEN” ವಿಷಯದ ಕುರಿತ ಮಲೆನಾಡು ವಿಭಾಗ ವ್ಯಾಪ್ತಿಯ ರೈತರಿಗೆ, ವರ್ತಕರಿಗೆ, ವ್ಯಾಪಾರಸ್ಥರಿಗೆ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿದೆ
ಈ ಬಗ್ಗೆ ಸಂಘದ ಅಧ್ಯಕ್ಷ ಎನ್.ಎ.ಮಾದೇಶ್ ಹೆಗ್ಡೆ ಮಾಹಿತಿ ನೀಡಿದ್ದು, ಮಲೆನಾಡು ವಿಭಾಗದ ಸರಕು ಮತ್ತು ಸೇವಾ ತೆರಿಗೆಗಳ ಜಾರಿ ಮತ್ತು ಜಾಗೃತಿ ವಿಭಾಗದ ಜಂಟಿ ಆಯುಕ್ತ ವಿಜಯ್ ಕುಮಾರ್, ಭತ್ತದ ಮತ್ತು ಆಡಳಿತ ವಿಭಾಗದ ಜಂಟಿ ಆಯುಕ್ತೆ ಹೆಚ್.ಎಸ್ ನಾಜೀಯಾ ಅಮಾನ್ ಕಾರ್ಯಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.
ಜಿಲ್ಲಾ ವ್ಯಾಪ್ತಿಯ ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿ, ಭದ್ರಾವತಿ ವ್ಯಾಪ್ತಿಯ ಸುತ್ತಲಿನ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ನೋಂದಾಯಿತ ಮತ್ತು ಅನೋಂದಾಯಿತ ಕರದಾತರು ಈ ಕಾರ್ಯಕಾರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ರೈತರು ತಮ್ಮ ತೆರಿಗೆದಾಯಕ ಕೃಷಿಗಳಾದ ಅಡಿಕೆ, ಶುಂಠಿ, ಮೆಣಸು ಸರಕು-ವ್ಯಾಪಾರ ವಹಿವಾಟುಗಳಿಗೆ ಸಂಬಂಧಿಸಿದಂತೆ ಸೃಜಿಸಬೇಕಾದ ಇ-ವೇ ಬಿಲ್ ಖರೀದಿ ಮತ್ತು ಮಾರಾಟ ಮೇಲಿನ ಅನೋಂದಾಯಿತ ತೆರಿಗೆ ಸೇರಿ ಮುಂತಾದ ತೆರಿಗೆ ವಿಚಾರಗಳಿಗೆ ಸಂಬಂಧಿತ ವಿಚಾರಗಳ ಕುರಿತು ವಿಡಿಯೋ ತುಣುಕುಗಳನ್ನು ಸಾರ್ವಜನಿಕ ಮಾಹಿತಿಗೆ ಬಿಡುಗಡೆಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | District arecanut traders association, enforcement and awareness and administration wing of commercial taxes department, has organized an information workshop for farmers, traders and traders of malnad division on the theme of “E-way bill for citizen” on october 16 at 3.30 pm at the apmc premises of the district arecanut traders association
KEYWORDS | District arecanut traders association, enforcement and awareness and administration wing of commercial taxes department, information workshop for farmers, traders of malnad division, E-way bill for citizen, apmc premises, district arecanut traders association