SHIVAMOGGA | MALENADUTODAY NEWS | ಮಲೆನಾಡು ಟುಡೆ Oct 18, 2024
ಶಿವಮೊಗ್ಗ | ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ವಿಳು ಮಂದಿ ಶಂಕಿತ ಬಾಂಗ್ಲಾ ಪ್ರಜೆಗಳನ್ನು ಶಿವಮೊಗ್ಗದ ಜಯನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವಿಚಾರ ಸಾಕಷ್ಟು ಆತಂಕ ಮೂಡಿಸಿದೆ. ಈಗಾಗಲೇ ಕರಾವಳಿ ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಶಿವಮೊಗ್ಗದಲ್ಲಿ ಅಕ್ರಮ ನೆಲಸಿಗರ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಂತಿದೆ.
ಈ ನಡುವೆ ನಗರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಎಂಬ ಸುದ್ದಿ ಕೇಳಿ ದಿಗ್ಧಮೆ ಆಯಿತು ಅಂತಾ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು ಶಿವಮೊಗ್ಗದ ದಕ್ಷ ಪೋಲೀಸರು ಬಾಂಗ್ಲಾ ವಾಸಿಗಳನ್ನ ಪತ್ತೆ ಹಚ್ಚಿರುವುದು ಸಮಾದಾನದ ವಿಷಯ. ಅಕ್ರಮ ವಲಸಿಗರ ಬಗ್ಗೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಒತ್ತಾಯಿಸಿದ್ದಾರೆ.
ಅಕ್ರಮ ಪಾಕಿಸ್ತಾನಿ ಪ್ರಜೆಗಳು ಹಾಗೂ ಬಾಂಗ್ಲಾ ನಿವಾಸಿಗಳ ಪ್ರಕರಣದ ಹಿಂದೆ ಭಾರತ ವಿರೋಧಿ ನಂಟಿನ ಶಂಕೆ ಇದ್ದು, ಪ್ರಕರಣ ಸಂಬಂಧ ಪ್ರತ್ಯೇಕ ವಿಶೇಷ ತನಿಖಾ ತಂಡ ವನ್ನು ರಚಿಸಬೇಕೆಂದು ರಾಜ್ಯ ಸರ್ಕಾರವನ್ನುಒತ್ತಾಯಿಸುವುದಾಗಿ ತಿಳಿಸಿದ್ದಾರೆ.
SUMMARY | KS Eshwarappa has demanded the formation of an SIT to probe illegal Bangladeshi immigrants in Shivamogga.
KEYWORDS | KS Eshwarappa, SIT to probe, illegal Bangladeshi immigrants in Shivamogga