SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024
ಯುವ ಪರಿವರ್ತಕರು-ಯುವ ಸಮಾಲೋಚಕರ ಹುದ್ದೆಗೆ ಶಿವಮೊಗ್ಗದಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜನ ಆರೋಗ್ಯ ಕೇಂದ್ರ, ಎಪಿಡಿಮಿಯಾಲಜಿ ವಿಭಾಗ, ನಿಮ್ಹಾನ್ಸ್ ಬೆಂಗಳೂರು ಹಾಗೂ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಯುವ ಸ್ಪಂದನ ಕಾರ್ಯಕ್ರಮದಡಿಯಲ್ಲಿ ಕಾರ್ಯ ನಿರ್ವಹಿಸಲು ಯುವ ಪರಿವರ್ತಕರು ಮತ್ತು ಯುವ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆ
21 ರಿಂದ 35 ವರ್ಷ ವಯಸ್ಸಿನ ಯುವ ಪರಿವರ್ತಕರು 03 ಮತ್ತು ಯುವ ಸಮಾಲೋಚಕರು 01 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಪದವಿ ಹಾಗೂ ಮೇಲ್ಪಟ್ಟು (ಫಿಸಿಯೋಲಾಜಿ/ ಸೋಷಿಯಲ್ ವರ್ಕ್ ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು) ಹಾಗೂ ಸಮುದಾಯದಲ್ಲಿ ಕೆಲಸ ಮಾಡಿರುವವರನ್ನು ಅಪೇಕ್ಷಿಸಲಾಗುವುದು.
ಸ್ಪಷ್ಟವಾದ ಕನ್ನಡ ಉಚ್ಛಾರಣೆ, ಉತ್ತಮ ಸಂವಹನ ಕೌಶಲ್ಯ ಇರಬೇಕು. ಯುವ ಪರಿವರ್ತಕರಿಗೆ ಗೌರವ ಧನವಾಗಿ ರೂ. 7000 ಹಾಗೂ ಯುವ ಸಮಾಲೋಚಕರಿಗೆ ಗೌರವ ಧನವಾಗಿ ರೂ. 9000 ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಇಲ್ಲಿ ಸಂಪರ್ಕಿಬಹುದು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | Jana Arogya Kendra, Department of Epidemiology, NIMHANS, Bangalore and Department of Youth Empowerment and Sports have invited applications for the post of Youth Converters and Youth Consultants to work under the Yuva Spandana programme.
KEYWORDS | Jana Arogya Kendra, Department of Epidemiology, NIMHANS, Bangalore and Department of Youth Empowerment and Sports, invited applications for the post , Youth Converters and Youth Consultants, Yuva Spandana programme.