SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 26, 2024 | V SOMMANA | ಶಿವಮೊಗ್ಗಕ್ಕೆ ಇಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ ಭೇಟಿಕೊಟ್ಟಿದ್ದಾರೆ. ವಿವಿಧ ಕಾಮಗಾರಿಗಳ ಪರಿಶೀಲನೆ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ವಂದೆ ಭಾರತ್ ಟ್ರೈನ್ ಬಗ್ಗೆ ವಿವರಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುತ್ತಿರುವ ವಿವಿಧ ರೈಲು ಕಾಮಗಾರಿಗಳ ಬಗ್ಗೆ ವಿವರಿಸಿದ ಸೋಮಣ್ಣ, ಮುಂದಿನ ನಾಲ್ಕೈದು ತಿಂಗಳಿನಲ್ಲಿ ಏಳು ವಂದೆಭಾರತ್ ಟ್ರೈನ್ ಬರಲಿದೆ. ಈ ರೈಲುಗಳ ಪೈಕಿ ಶಿವಮೊಗ್ಗಕ್ಕೆ ವಂದೆ ಭಾರತ್ ಟ್ರೈನ್ ಕೊಡಿಸಿ ಎಂದು ಸದಾ ಸಂಸದ ರಾಘವೇಂದ್ರರವರು ಒತ್ತಡ ಹೇರುತ್ತಿದ್ದಾರೆ. ಪ್ರತಿಸಲ ಫೋನ್ ಮಾಡಿದಾಗಲೂ ಬಿವೈ ರಾಘವೇಂದ್ರರವರು ಶಿವಮೊಗ್ಗಕ್ಕೆ ಒಂದು ವಂದೇ ಭಾರತ್ ಟ್ರೈನ್ ಕೊಡಿಸಿ ಎನ್ನುತ್ತಿದ್ದಾರೆ.
ಈ ಸಂಬಂಧ ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನ್ Ashwini Vaishnaw (ಅಶ್ವಿನಿ ವೈಷ್ಣವ್) ರವರನ್ನ ಭೇಟಿ ಮಾಡಿದಾಗಲೆಲ್ಲಾ ಈ ವಿಚಾರವನ್ನು ಅವರಿಗೆ ಮನದಟ್ಟು ಮಾಡಿದ್ದೇನೆ ಎಂದು ತಿಳಿಸಿದರು. ಅಲ್ಲದೆ ಶಿವಮೊಗ್ಗದಲ್ಲಿ ವಂದೇ ಭಾರತ್ ಕೋಚಿಂಗ್ ಡಿಪೋ ಆಗುತ್ತಿದ್ದು, ಅದರಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
Union Minister of State for Railways V Somanna , ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ , Vande Bharat train to Shivamogga