SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 4, 2024 | ಶಿವಮೊಗ್ಗ ನವರಾತ್ರಿ ಉತ್ಸವದ ಅಂಗವಾಗಿ ಇವತ್ತು ನಗರದಲ್ಲಿ ಹಲವೆಡೆ ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ಇವತ್ತು ಭೀಮಾ ಸಿನಿಮಾದಲ್ಲಿ ಗಿರಿಜಾ ಪಾತ್ರ ನಿರ್ವಹಿಸಿದ ನಟಿ ಪ್ರಿಯಾ ಶತಮರ್ಷಣ (Priya Shatamarshana) ರವರು ಬರಲಿದ್ದಾರೆ.
ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ನಡೆಯಲಿರುವ ಮಹಿಳಾ ದಸರಾದಲ್ಲಿ ಅವರು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮವನ್ನು ಉದ್ಧಾಟಿಸಲಿದ್ದಾರೆ. ಸಂಜೆ 4.30 ಕ್ಕೆ ಕಾರ್ಯಕ್ರಮ ನಡೆಯಲಿದೆ.
ಶಾಖಾಹಾರಿ ಸಿನಿಮಾ ವೀಕ್ಷಣೆ
ಇತ್ತ ದಸರಾ ಚಲನಚಿತ್ರೋತ್ಸವದ ಅಂಗವಾಗಿ ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಇವತ್ತು ಶಾಖಾಹಾರಿ ಸಿನಿಮಾ ಪ್ರದರ್ಶನಗೊಳ್ಳಲಿದೆ.
ಇನ್ನೂ ದಸರಾ ಚಲನಚಿತ್ರೋತ್ಸವದ ಅಂಗವಾಗಿ ಶಿವಮೊಗ್ಗ ನಗರ ಅಂಬೇಡ್ಕರ್ ಭವನದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ, ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ – ಶಿವಮೊಗ್ಗ ಚಿತ್ರ ಸಮಾಜ ಇವರ ಸಹಯೋಗದಲ್ಲಿ ದಸರಾ ಚಲನಚಿತ್ರೋತ್ಸವ 2024 ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮವನ್ನ ಮಾಜಿ ಸಚಿವೆ ಹಿರಿಯ ಕಲಾವಿದೆ ಉಮಾಶ್ರಿಯವರು ಉದ್ಘಾಟಿಸಲಿದ್ದರು. ಕಾರ್ಯಕ್ರಮದಲ್ಲಿ ನಟಿ ಪ್ರಿಯಾ ಶತಮರ್ಷಣ (Priya Shatamarshana) ರವರು ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ಖ್ಯಾತ ಚಲನಚಿತ್ರ ಸಾಹಿಸಿ ಡಾ.ವಿ ನಾಗೇಂದ್ರ ಪ್ರಸಾದರವರು ಚಿತ್ಸೋವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲಿದ್ದಾರೆ.