SHIVAMOGGA | MALENADUTODAY NEWS | ಮಲೆನಾಡು ಟುಡೆ Oct 29, 2024
ದಾವಣಗೆರೆ | ಅಪರೂಪಕ್ಕೆ ಬೆಚ್ಚಿಬೀಳಿಸುವಂತಹ ಬ್ಯಾಂಕ್‌ಗೆ ಕನ್ನ ಹಾಕುವ ಪ್ರಕರಣ ಶಿವಮೊಗ್ಗದಲ್ಲಿ ನಡೆಯುತ್ತಿತ್ತು. ಇದೀಗ ದಾವಣಗೆರೆಯಲ್ಲಿ ಅಂತಹದ್ದೊಂದು ಘಟನೆ ನಡೆದಿದ್ದು, ಪೊಲೀಸ್ ಇಲಾಖೆಗೆ ಶಾಕ್ ನೀಡಿದೆ.
ಏನಿದು ಪ್ರಕರಣ
ದಾವಣಗೆರೆ ನ್ಯಾಮತಿ ಪೇಟೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ದ ಶಾಖೆಯ ಕಿಟಕಿಯ ಸರಳು ಮುರಿದು ಕನ್ನ ಹಾಕಲಾಗಿದೆ.
ಇಲ್ಲಿನ ನೆಹರು ರಸ್ತೆಯಲ್ಲಿರುವ ಶಾಖೆಯಲ್ಲಿ ಎರಡು ದಿನಗಳ ಹಿಂದೆಯೇ ಕಳ್ಳರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ವಿಕೇಂಡ್‌ನಲ್ಲಿ ರಜೆಯ ಸಂದರ್ಭದಲ್ಲಿ ಕೃತ್ಯವೆಸಗಲಾಗಿದೆ.
ಕಿಟಕಿಯ ಸರಳುಗಳನ್ನು ಮುರಿದು ಎಸ್ ಬಿಐ ಬ್ಯಾಂಕ್ ಗೆ ನುಗ್ಗಿರುವ ದರೋಡೆಕೋರರು ಬ್ಯಾಂಕ್ ನ ಮೇನ್ ಲಾಕರ್ ಒಡೆದು ಅದರಲ್ಲಿಟ್ಟಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಬ್ಯಾಂಕ್‌ನ ಸಿಸಿ ಕ್ಯಾಮರಾದ ಡಿವಿಆರ್ ಸಮೇತ ಪರಾರಿಯಾಗಿರುವ ಕಳ್ಳರು ಎಷ್ಟು ಚಿನ್ನ ದುಡ್ಡು ಕದ್ದೊಯದ್ದೀದ್ದಾರೆ. ಪೊಲೀಸ್ ಮೂಲಗಳ ಪ್ರಕಾರಣ ಹಣ ಕಳ್ಳತನವಾಗಿಲ್ಲ . ಆದರೆ ಸುಮಾರು 13 ಕೋಟಿ ಮೌಲ್ಯದ ಚಿನ್ನದ ಆಭರಣಗಳು ಕಳುವಾಗಿದೆ ಎನ್ನಲಾಗಿದೆ.
SUMMARY | Gold ornaments were stolen from the State Bank of India bank at Nyamathi in Davanagere district , Massive Rs 13 Crore Jewellery Heist at SBI in Nyamati Town
KEYWORDS | thives struck the Nyamati town branch , State Bank of India ,SBI, Nehru Road ,jewellery Nyamati police ,