ವಿಧಾನಸೌಧದಲ್ಲಿ ಅಟೆಂಡರ್‌ ಕೆಲಸ ಕೊಡಿಸುವುದಾಗಿ ಭದ್ರಾವತಿ ನಿವಾಸಿಗೆ ₹4 ಲಕ್ಷ ವಂಚನೆ | ಸಾರ್ವಜನಿಕರೇ ಎಚ್ಚರ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ವಿಧಾನಸೌಧದಲ್ಲಿ ಅಟೆಂಡರ್‌ ಕೆಲಸ ಕೊಡಿಸುತ್ತೇನೆ ಎಂದು ಭದ್ರಾವತಿಯ ನಿವಾಸಿಯೊಬ್ಬರಿಗೆ ಮೋಸದ ಮಾಡಿದ ಪ್ರಕರಣ ಸಂಬಂಧ ಭದ್ರಾವತಿ ತಾಲ್ಲೂಕು ಪೇಪರ್‌ ಟೌನ್‌ ಪೊಲೀಸ್‌ ಠಾಣೆಯಲ್ಲಿ BHARATIYA NYAYA SANHITA (BNS), 2023 (U/s-316(2),318(4)) ಅಡಿಯಲ್ಲಿ ಕೇಸ್‌ ದಾಖಲಾಗಿದೆ. 

ಸಾರ್ವಜನಿಕರೇ ಎಚ್ಚರ

ಇಲ್ಲಿನ ರಬ್ಬರ್‌ ಕಾಡು ನಿವಾಸಿಯೊಬ್ಬರು ತಮ್ಮ ಕುಟುಂಬದ ಸದಸ್ಯನಿಗೆ ಕೆಲಸ ಕೊಡಿಸುವ ಆಸೆಯಲ್ಲಿದ್ದರು. ಇದೇ ವೇಳೆ ಊರಿನ ವ್ಯಕ್ತಿಯೊಬ್ಬರು ತಮಗೊಬ್ಬರು ಪರಿಚಯವಿದ್ದಾರೆ, ಅವರಿಗೆ 10 ಲಕ್ಷ ರೂಪಾಯಿ ನೀಡಿದರೆ, ಕೆಲಸ ಕೊಡಿಸುತ್ತಾರೆ ಎಂದು ತಿಳಿಸಿದ್ದರು. 

ಅದರಂತೆ ಮನೆಯಲ್ಲಿ ಚರ್ಚೆ ಮಾಡಿದ ದೂರುದಾರರು ದುಡ್ಡು ಕೊಟ್ಟು ಕೆಲಸ ಪಡೆಯುವುದಕ್ಕೆ ಸಮ್ಮತಿಸಿದ್ದರು. ಬಳಿಕ ದೂರುದಾರರನ್ನು ವಿಜಯಪುರ ತಾಲ್ಲೂಕಿನ ರಾಕೇಶ್‌ ಎಂಬವರು ಸಂಪರ್ಕಿಸಿ, ವಿಧಾನಸೌಧದಲ್ಲಿ ಅಟೆಂಡರ್‌ ಕೆಲಸ ಕೊಡಿಸುತ್ತೇನೆ. ದಾಖಲಾತಿ ಹಾಗೂ ಐದು ಲಕ್ಷ ಅಡ್ವಾನ್ಸ್‌ ಹಣವನ್ನು ನೀಡಬೇಕು ಎಂದಿದ್ದಾರೆ. 

ಈ ಕುರಿತಾಗಿ ನಡೆದ ಮಾತುಕತೆಯ ನಂತರ, ದೂರುದಾರರು ಬೆಂಗಳೂರಿಗೆ ತೆರಳಿ ರಾಕೇಶ್‌ಗೆ ದಾಖಲೆಗಳನ್ನು ನೀಡಿದ್ದಷ್ಟೆ ಅಲ್ಲದೆ ಎರಡು ದಿನಗಳ ನಂತರ ಹಂತ ಹಂತವಾಗಿ ಅಡ್ವಾನ್ಸ್‌ ಹಣವನ್ನು ಸಹ ಕೊಟ್ಟಿದ್ದರು. ಹಣ ಪಡೆದ ರಾಕೇಶ್‌ ಆರ್ಡರ್‌ ಕಾಪಿ ಕಳಿಸುತ್ತೇನೆ. ಉಳಿದ ಹಣ ಆರು ಲಕ್ಷ ರೂಪಾಯಿ ರೆಡಿ ಮಾಡಿಕೊಳ್ಳಿ ಎಂದು ಹೇಳಿ, ಫೇಕ್‌ ಆರ್ಡರ್‌ ಕಾಫಿಯೊಂದನ್ನು ದೂರುದಾರರಿಗೆ ಕಳಹಿಸಿದ್ದರು. ಆದರೆ 

ಆದೇಶ ಕಾಪಿಯನ್ನು ನೋಡಿ ಸಂತ್ರಸ್ತರಿಗೆ ಅನುಮಾನ ಬಂದಿದೆ. ಹೀಗಾಗಿ ಇದು ನಿಜವಾದ ಆರ್ಡರ್‌ ಕಾಪಿಯೇ ಅಲ್ಲವೆ ಎಂಬುದನ್ನು ಖಾತರಿ ಪಡಿಸಬೇಕು ಎಂದು ತಮ್ಮ ಮನೆಗೆ ಕರೆಸಿಕೊಂಡು ರಾಕೇಶ್‌ಗೆ ಒತ್ತಡ ಹೇರಿದ್ದಾರೆ. ಆ ಬಳಿಕ ರಾಕೇಶ್‌ ನಾಪತ್ತೆಯಾಗಿದ್ದು, ಇನ್ನಷ್ಟು ಆತಂಕಗೊಂಡ ದೂರುದಾರರು, ತಮ್ಮ ಪರಿಚಯಸ್ಥರ ಬಳಿ ಕೆಲಸದ ಆದೇಶದ ಕಾಪಿ ತೋರಿ ವಿಚಾರಿಸಿದ್ದಾರೆ. ಆಗ ಅದು ನೈಜವಾದುದಲ್ಲ. ಅದು ನಕಲಿ ಎಂಬುದು ತಿಳಿದುಬಂದಿದೆ. ಹೀಗಾಗಿ ದೂರು ದಾಖಲಿಸಿ ರಾಕೇಶ್‌ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. 

 

SUMMARY |  fake job case in shivamogga, Man duped of job as attendant in Vidhana Soudha

KEY WORDS |  fake job case in shivamogga, Man duped of job as attendant in Vidhana Soudha

Share This Article