SHIVAMOGGA | MALENADUTODAY NEWS | ಮಲೆನಾಡು ಟುಡೆ Nov 11, 2024
ಚಿಕ್ಕಮಗಳೂರಿನ ಆಲ್ದೂರಿನಲ್ಲಿ ಕಾಡಾನೆಯೊಂದು ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದೆ. ಕಾಫಿ ತೋಟಕ್ಕೆ ಹಾಕಿದ್ದ ವಿದ್ಯುತ್ ಬೇಲಿ ತಗುಲಿ ಕಾಡಾನೆ ಸಾವನ್ನಪ್ಪಿದೆ.
ಆಲ್ದೂರಿನ ತುಡುಕೂರು ಗ್ರಾಮದ ಕಾಫಿ ತೋಟದಲ್ಲಿ ಘಟನೆ ನಡೆದಿದೆ. ಮೃತ ಆನೆಯನ್ನ ಈ ಭಾಗದಲ್ಲಿ ಉಪಟಳ ನೀಡುತ್ತಿರುವ ಬೀಟಮ್ಮ ಗ್ಯಾಂಗ್ನ ಆನೆ ಎಂದು ನಂಬಲಾಗಿದೆ.
ಆಲ್ದೂರು ಸುತ್ತಮುತ್ತ 17 ಕಾಡಾನೆಗಳು ಆನೆಗಳು ಬೀಡು ಬಿಟ್ಟಿವೆ. ಆನೆ ಉಪಟಳದ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೆಲವು ಶಾಲೆಗಳಿಗೆ ರಜೆ ನೀಡಲಾಗಿದೆ. ಅಲ್ಲದೆ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ಇದರ ನಡುವೆ ಕಾಡಾನೆಯ ಸಾವು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ.

SUMMARY | A wild elephant of the Beetamma gang died of electrocution near Aldur in Chikkamagaluru
KEYWORDS | wild elephant ,Beetamma gang ,electrocution, Aldur in Chikkamagaluru