SHIVAMOGGA | MALENADUTODAY NEWS | ಮಲೆನಾಡು ಟುಡೆ
Sep 30, 2024 | ಶಿವಮೊಗ್ಗ ಟ್ರಾಫಿಕ್ ಪೊಲೀಸ್ (East Traffic PS) ಪ್ರಕರಣವೊಂದರಲ್ಲಿ ಕುಡಿದು ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ವಿರುದ್ಧ ಶಿವಮೊಗ್ಗ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಶಿವಮೊಗ್ಗದ PRL. CIVIL JUDGE AND JMFC, SHIVAMOGGA ಕೋರ್ಟ್ ಪ್ರಕರಣ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತ ವಾಹನ ಸವಾರನಿಗೆ ಬರೋಬ್ಬರಿ 11 ಸಾವಿರ ರೂಪಾಯಿ ಪೈನ್ ಹಾಕಿದೆ
ವಾಹನ ತಪಾಸಣೆಯ ವೇಳೆ ವಾಹನ ಚಾಲಕರೊಬ್ಬರು ಮದ್ಯಪಾನ ಮಾಡಿದ್ದ ಆರೋಪ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಮೋಟಾರ್ ವೆಹಿಕಲ್ ಕಾಯ್ದೆ 185, 3(1) R/w 181 ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಈ ಸಂಬಂಧ ಶಿವಮೊಗ್ಗ ಕೋರ್ಟ್ 11 ಸಾವಿರ ರೂಪಾಯಿ ದಂಡ ವಿಧಿಸಿದೆ. 26 ನೇ ತಾರೀಖು ನಡೆದ ಪ್ರಕರಣದ ವಿವರವನ್ನ ಶಿವಮೊಗ್ಗ ಎಸ್ಪಿ ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.