SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ಶಿವಮೊಗ್ಗ | ವಕ್ಫ್ ಬೋರ್ಡ್ ನೋಟಿಸ್ ವಿರುದ್ಧ ಇದೇ ನವೆಂಬರ್ 4 ರಿಂದ ಬಿಜೆಪಿ ರಾಜ್ಯಾದ್ಯಂತ ದೊಡ್ಡ ಪ್ರತಿಭಟನೆ ಮಾಡಲಿದೆ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ತಿಳಿಸಿದೆ. ಇವತ್ತು ಈ ಸಂಬಂಧ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಅಶೋಕ್ ನಾಯ್ಕ್ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಗೊಂದಲ ಸೃಷ್ಟಿ ಆಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಶರಾವತಿ ಸಂತ್ರಸ್ಥರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಿದರು, ಇದೀಗ ವಕ್ಪ್ ಮೂಲಕ ರೈತರು, ಮಠ ಮಾನ್ಯ ದೇವಸ್ಥಾನದ ಆಸ್ತಿಗೆ ಕೈ ಹಾಕಿದ್ದಾರೆ. ಸ್ಯಾಮ್ ಪಿತ್ರೋಡಾ ಈ ಹಿಂದೆ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಜನರ ಅರ್ಧ ಆಸ್ತಿ ಪಡೆಯುತ್ತೇವೆ ಎಂದಿದ್ದರು. ಅದರ ಮೊದಲ ಹಂತವಾಗಿ ವಕ್ಪ್ ಮೂಲಕ ರೈತರನ್ನು, ಬಡವರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.
ಎಲ್ಲಾ ರೈತರು ಮೊದಲು ನಿಮ್ಮ ನಿಮ್ಮ ಪಹಣಿ ಪರಿಶೀಲನೆ ನಡೆಸಿ, ಯಾರ ಯಾರ ಹೆಸರಿನಲ್ಲಿ ಈ ಆಸ್ತಿ ಇರುತ್ತದೋ ಗೊತ್ತಿಲ್ಲ ಎಂದ ಅಶೋಕ್ ನಾಯ್ಕ್ ಮೊದಲು ರೈತರು ಪಹಣಿ ತೆಗೆಸಿ ಪರಿಶೀಲನೆ ನಡೆಸಿ ಎಂದರು. ಅಲ್ಲದೆ ಸಚಿವರಾದ ಜಮೀರ್ ಅಹಮದ್ ಅವರೇ ದಯಮಾಡಿ ಇವತ್ತಿಗೆ ಇದನ್ನು ನಿಲ್ಲಿಸಿ ಎಂದು ಮನವಿ ಮಾಡಿದರು.
SUMMARY | Shivamogga, the district BJP said it would hold a massive protest across the state from November 4 against the Waqf Board notice.
KEYWORDS | Shivamogga, district BJP , massive protest across the state from November 4 against the Waqf Board notice,