SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024
ಶಿವಮೊಗ್ಗ | ಇಲ್ಲಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕುತೂಹಲಕಾರಿ ವಿಷಯದ ಬಗ್ಗೆ ಒಂದು FIR ದಾಖಲಾಗಿದೆ.
ವಾಟ್ಸ್ಯಾಪ್ ನಲ್ಲಿ ಜಾಬ್ ಗ್ರೂಪ್ನಲ್ಲಿದ್ದ ವ್ಯಕ್ತಿಯೊಬ್ಬನನ್ನ ಸಂಪರ್ಕಿಸಿದ ಫೇಕ್ ಟೀಂ ಒಂದು ಆತನಿಗೆ ಬರೋಬ್ಬರಿ 58 ಲಕ್ಷ ರೂಪಾಯಿ ಮೋಸ ಮಾಡಿರುವ ಬಗ್ಗೆ ವರದಿಯಾಗಿದೆ.
ಆನ್ಲೈನ್ನಲ್ಲಿ ಟೆಕ್ನಿಕಲ್ ಸ್ಕಿಲ್ ತರಬೇತಿ ಪಡೆಯುತ್ತಿದ್ದಾಗ ಒಬ್ಬಾತನಿಗೆ ಶ್ರೀನಿಧಿ ಎಂಬಾತ ಕರೆ ಮಾಡಿದ್ದಾನೆ. ಆ ಬಳಿಕ ಆನ್ಲೈನ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 6.69 ಲಕ್ಷ ಪಡೆದುಕೊಂಡಿದ್ದನಂತೆ. ಆನಂತರ ಫೇಕ್ ಅಪಾಯಿಂಟ್ಮೆಂಟ್ ಲೆಟರ್ ಹಾಗೂ ಲ್ಯಾಪ್ ಟ್ಯಾಪ್ ನೀಡಿದ್ದಾರೆ. ಆದರೆ ಕೆಲಸ ಕೊಟ್ಟಿರಲಿಲ್ಲ. ಈ ಬಗ್ಗೆ ಸಂಬಂಧಪಟ್ಟ ನಂಬರ್ಗೆ ಕರೆ ಮಾಡಿದಾಗ, ಆ ಕಂಪನಿಯ ಮಾಲೀಕರು ಇನ್ನೊಬ್ಬರು ಎಂದು ತಿಳಿಸಲಾಗಿದೆ. ಆತ ಸೂಚಿಸಿದ ವ್ಯಕ್ತಿಗೆ ಕರೆ ಮಾಡಿದಾಗ, ಆತನೂ ಕೆಲಸ ಕೊಡಿಸುವ ಭರವಸೆ ನೀಡಿ ಮೋಸ ಮಾಡಿದ್ದಾರೆ.
ಹೀಗೆ ನಿರಂತರವಾಗಿ ಎರಡು ವರ್ಷದಲ್ಲಿ 58 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು SHIVAMOGGA CEN STATION ನಲ್ಲಿ ದೂರು ದಾಖಲಾಗಿದೆ
SUMMARY | man who was in a job group on WhatsApp was allegedly duped of Rs 58 lakh by a fake team who contacted him.
KEYWORDS | job group on WhatsApp , duped of Rs 58 lakh , fake team