SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೆಲ್ತ್ ಮೆರಿಟ್ ಮೇಲೆ ಜಾಮೀನು ಲಭ್ಯವಾಗಿದೆ. ಆದರೆ ಪ್ರಕರಣದ ಮತ್ತೊಬ್ಬ ಆರೋಪಿ ಪವಿತ್ರಾಗೌಡರಿಗೆ ಇನ್ನೂ ಜಾಮೀನು ಮಂಜೂರು ಆಗಿಲ್ಲ. ಈ ನಡುವೆ ಜಾಮೀನಿಗಾಗಿ ಹೈಕೋರ್ಟ್ ಮೊರೆಹೋಗಿರುವ ಪವಿತ್ರಾಗೌಡ ಪರ ವಕೀಲರು ಹೈಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾಗೌಡರ ಪಾತ್ರವಿಲ್ಲ ಎಂದು ವಾದ ಮಂಡಿಸಿದ್ದಾರೆ.
ಪಟ್ಟಣಗೆರೆ ಶೆಡ್ ಗೆ ರೇಣುಕಾಸ್ವಾಮಿಯನ್ನು ಕರೆತಂದಾಗ ಪವಿತ್ರಾ ಗೌಡ ನಟ ದರ್ಶನ್ ಜೊತೆ ತೆರಳಿದ್ದರು ಅಲ್ಲಿ ಅವರು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ . ಆ ಬಳಿಕ ಅಲ್ಲಿಂದ ತೆರಳಿದ್ದಾರೆ. ನಂತರ ಏನಾಗಿದೆ ಎಂಬುದು ಪವಿತ್ರಾಗೌಡರಿಗೆ ಗೊತ್ತಿಲ್ಲ ಎಂದು ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ.
ಪವಿತ್ರಾಗೌಡ ಪರ ವಕೀಲರ ವಾದವೇನು?
-
ರೇಣುಕಾಸ್ವಾಮಿ ಕೊಲೆಗೆ ಪವಿತ್ರಾ ಯಾವುದೇ ಪಿತೂರಿ ನಡೆಸಿಲ್ಲ.
-
ಕೊಲೆಮಾಡುವ ಉದ್ದೇಶದಿಂದ ಬಲವಂತವಾಗಿರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಹಹರಣ ಮಾಡಲಾಗಿದೆ ಎಂಬುದಕ್ಕೆ ಸಾಕ್ಷಿಗಳಿಲ್ಲ
-
ಸೋನಿ ಬ್ರೂಕ್ ರೆಸ್ಟೋರೆಂಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ. ನಡೆದಿದೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ
-
ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ (ಹಳೆಯಪ್ರಕರಣವೊಂದರಲ್ಲಿ)
-
ಪವಿತ್ರಾಗೌಡಗೆ 9ನೇ ತರಗತಿ ಓದುತ್ತಿರುವ ಪುತ್ರಿ ಇದ್ದಾಳೆ ಎಂಬುದುನ್ನ ನ್ಯಾಯಪೀಠ ಪರಿಗಣಿಸಬೇಕು ಎಂದು ಪವಿತ್ರಾಗೌಡರ ಪರ ವಕೀಲರು ವಾದ ಮಂಡಿಸಿದ್ದಾರೆ.
-
ಈ ನಡುವೆ ವಾದ ಆಲಿಸಿದ ನ್ಯಾಯಪೀಠವು ಅರ್ಜಿಗಳ ವಿಚಾರಣೆಯನ್ನು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ
SUMMARY | Pavithra Gowda’s lawyer argued in the High Court in the Renukaswamy murder case.
KEY WORDS | Pavithra Gowda lawyer , High Court , Renukaswamy murder case