SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 26, 2025
ಕಾಂತಾರ ಚಿತ್ರದ ಮೂಲಕ ದೇಶ ವಿದೇಶದೆಲ್ಲೆಡೆ ಹೆಸರು ಮಾಡಿದ್ದ ರಿಷಬ್ ಶೆಟ್ಟಿ ಇದೀಗ ಛತ್ರಪತಿ ಶಿವಾಜಿ ಜೀವನಾಧರಿತ ಚಿತ್ರವಾದ ದಿ ಪ್ರೈಡ್ ಆಫ್ ಭಾರತ್ ಛತ್ರಪತಿ ಶಿವಾಜಿ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿಗೆ ಹೊಸದೊಂದು ಸಮಸ್ಯೆ ಎದುರಾಗಿದೆ. ಅದೇನೆಂದರೆ ಶಿವಾಜಿ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಟಾಳ್ ನಾಗರಾಜ್ ಹೇಳಿದ್ದೇನು
ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿಗೆ ಈಗಾಗಲೇ ಹೆಚ್ಚು ದುಡ್ಡು ಬಂದಿದೆ . ಆದರೂ ಈಗ ಛತ್ರಪತಿ ಶಿವಾಜಿಯ ಸಿನಿಮಾ ಮಾಡಲು ಹೊರಟಿದ್ದಾನೆ. ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಂಡ್ರೆ ಖಂಡಿತ ನಮ್ಮ ನಾಡಿನ ಜನ ಒಪ್ಪೋದಿಲ್ಲ. ಕರ್ನಾಟಕದಲ್ಲಿ ಶಿವಾಜಿ ಅವರ ಪ್ರತಿಮೆ ಬಹಳಷ್ಟಿದೆ. ಆದರೆ ಮಹಾರಾಷ್ಟ್ರದಲ್ಲಿ ಕರ್ನಾಟಕ ಹೋರಾಟಗಾರರ ಯಾವುದೇ ಪ್ರತಿಮೆ ಇಲ್ಲ. ನಮ್ಮ ರಾಜ್ಯಕ್ಕೆ ಶಿವಸೇನೆ ಬೇಕಾಗಿಲ್ಲ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
SUMMARY | Pro Kannada activist Vatal has expressed his displeasure over Rishab Shetty playing the role of Shivaji.
KEYWORDS | Rishab Shetty, Vatal nagaraj, chatrapati shivaji,